ADVERTISEMENT

ಪಾಕ್‌ ಸೇನಾ ಮುಖ್ಯಸ್ಥರನ್ನ ಸಿಧು ಆಲಂಗಿಸಿದ್ದು ನಾಚಿಕೆಗೇಡಿನ ಪರಮಾವಧಿ: ಶಿವಸೇನಾ

ಪಿಟಿಐ
Published 20 ಆಗಸ್ಟ್ 2018, 10:43 IST
Last Updated 20 ಆಗಸ್ಟ್ 2018, 10:43 IST
ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಆಲಂಗಿಸುತ್ತಿರುವ ನವಜೋತ್‌ ಸಿಂಗ್‌ ಸಿಧು –ಎಎನ್‌ಐ ಚಿತ್ರ
ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಆಲಂಗಿಸುತ್ತಿರುವ ನವಜೋತ್‌ ಸಿಂಗ್‌ ಸಿಧು –ಎಎನ್‌ಐ ಚಿತ್ರ   

ಮುಂಬೈ : ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಆಲಂಗಿಸಿದ ಪಂಜಾಬ್‌ ಸರ್ಕಾರದ ಸಚಿವ ನವಜೋತ್‌ ಸಿಂಗ್‌ ಸಿಧು ವಿರುದ್ಧ ಶಿವಸೇನಾ ಆಕ್ರೋಶ ವ್ಯಕ್ತಪಡಿಸಿದೆ. ಸಿಧು ಅವರ ಈ ನಡೆ ‘ನಾಚಿಕೆಗೇಡಿನ ಪರಮಾವಧಿ’ ಎಂದು ಅದು ಟೀಕಿಸಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ಖಾನ್‌ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ಸಿಧು, ಪಾಕ್‌ನ ಸೇನಾ ಮುಖ್ಯಸ್ಥ ಖಮರ್‌ ಜಾವೇದ್‌ ಬಜ್ವಾ ಅವರನ್ನು ಆತ್ಮೀಯವಾಗಿ ಆಲಂಗಿಸಿಕೊಂಡಿದ್ದರು.

ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಶಿವಸೇನೆ, ಸಿಧುರನ್ನು ‘ದೇಶದ್ರೋಹಿ’ ಎಂದು ಕರೆದ ಬಿಜೆಪಿಯನ್ನೂ ಟೀಕಿಸಿದೆ. ‘ಯಾರಿಗೇ ಆಗಲಿ, ಕೆಲವರು ಸುಲಭವಾಗಿ ‘ದೇಶದ್ರೋಹಿ’ ಪಟ್ಟ ಕಟ್ಟಿಬಿಡುತ್ತಾರೆ. ನೋಟು ರದ್ದು ಕ್ರಮವನ್ನು ವಿರೋಧಿಸಿದವರು, ಮೋದಿಯನ್ನು ಟೀಕಿಸಿದವರೂ ‘ದೇಶದ್ರೋಹಿ’ಗಳಾಗಿ ಬಿಡುತ್ತಾರೆ’ಎಂದು ಅದು ಟೀಕಿಸಿದೆ.

ADVERTISEMENT

‘ಈ ಮೊದಲು ಪ್ರಧಾನಿ ಮೋದಿ, ಪಾಕಿಸ್ತಾನದ ಆಗಿನ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಆಲಂಗಿಸಿಕೊಂಡು ಶುಭ ಕೋರಿದಾಗ ಅದನ್ನು ಬಿಜೆಪಿಗರು ‘ಮಹಾನ್‌ ನಡೆ’ ಎಂದು ಕೊಂಡಾಡಿದ್ದರು. ಆದರೆ, ಈಗ ಅದೇ ರೀತಿ ನಡೆದುಕೊಂಡ ಸಿಧು ಅವರನ್ನು ಟೀಕಿಸುತ್ತಿದ್ದಾರೆ ಎಂದು ಶಿವಸೇನೆ’ ವ್ಯಂಗ್ಯವಾಡಿದೆ.

ಇದನ್ನೂ ಓದಿರಿ..
*ಸಿಧು ವಿರುದ್ಧ ಅಮರಿಂದರ್‌ ಅಸಮಾಧಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.