ADVERTISEMENT

Covid-19 India Update | ಒಂದೇ ದಿನ 32,695 ಪ್ರಕರಣ: 10 ಲಕ್ಷ ಮೀರಿದ ಕೋವಿಡ್

ಏಜೆನ್ಸೀಸ್
Published 16 ಜುಲೈ 2020, 19:54 IST
Last Updated 16 ಜುಲೈ 2020, 19:54 IST
ಗುಜರಾತ್‌ನ ಅಹಮದಾಬಾದ್‌ನ ಕಂಟೈನ್‌ಮೆಂಟ್‌ ವಲಯವೊಂದರಲ್ಲಿ ವೈದ್ಯಕೀಯ ಸಿಬ್ಬಂದಿಯೊಬ್ಬರು ಮಗುವಿನ ದೇಹ ಉಷ್ಣಾಂಶ ಪರೀಕ್ಷೆ ನಡೆಸುತ್ತಿರುವುದು (ರಾಯಿಟರ್ಸ್‌ ಚಿತ್ರ)
ಗುಜರಾತ್‌ನ ಅಹಮದಾಬಾದ್‌ನ ಕಂಟೈನ್‌ಮೆಂಟ್‌ ವಲಯವೊಂದರಲ್ಲಿ ವೈದ್ಯಕೀಯ ಸಿಬ್ಬಂದಿಯೊಬ್ಬರು ಮಗುವಿನ ದೇಹ ಉಷ್ಣಾಂಶ ಪರೀಕ್ಷೆ ನಡೆಸುತ್ತಿರುವುದು (ರಾಯಿಟರ್ಸ್‌ ಚಿತ್ರ)   
""
""

ನವದೆಹಲಿ: ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯು ಹತ್ತು ಲಕ್ಷವನ್ನು ದಾಟಿದೆ.ವಿವಿಧ ರಾಜ್ಯಗಳಿಂದ ಬಂದ ಮಾಹಿತಿ ಪ್ರಕಾರ, ಗುರುವಾರ ರಾತ್ರಿ 9 ಗಂಟೆಯ ಹೊತ್ತಿಗೆ ಪ್ರಕರಣಗಳ ಸಂಖ್ಯೆ 10,01,504 ಎಂದು ತಿಳಿದು ಬಂದಿದೆ. ಸಾವಿನ ಸಂಖ್ಯೆಯು 25,565 ಆಗಿದೆ.ಸತತ ಎರಡನೇ ದಿನವೂ ದೇಶದಲ್ಲಿ 30 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಗುರುವಾರ ಬೆಳಗ್ಗೆ 8 ಗಂಟೆಯ ವರೆಗಿನ 24 ತಾಸುಗಳಲ್ಲಿ 32,695 ಪ್ರಕರಣಗಳು ದೃಢಪಟ್ಟಿವೆ. ಇದು ಒಂದು ದಿನದಲ್ಲಿನ ಈವರೆಗಿನ ಗರಿಷ್ಠ ಏರಿಕೆಯಾಗಿದೆ. ಇದರಿಂದಾಗಿ ಒಟ್ಟು ಪ್ರಕರಣಗಳು 9,68,876ಕ್ಕೆ ಏರಿದೆ ಎಂದು ಕೇಂದ್ರಆರೋಗ್ಯ ಸಚಿವಾಲಯ ತಿಳಿಸಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಪ್ರಕರಣಗಳು ದೃಢಪಟ್ಟ ಮೂರನೇ ದೇಶ ಭಾರತ. ಅಮೆರಿಕ (36.41 ಲಕ್ಷ) ಮತ್ತು ಬ್ರೆಜಿಲ್‌ನಲ್ಲಿ (19.72 ಲಕ್ಷ) ಭಾರತಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ADVERTISEMENT

ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸೋಂಕು ಹರಡುವಿಕೆ ಹೆಚ್ಚು ವೇಗ ಪಡೆದುಕೊಂಡಿದೆ. ಕೇರಳ, ಗೋವಾ ರಾಜ್ಯಗಳು ಸೋಂಕನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಲ್ಲಿ ಆರಂಭದಲ್ಲಿ ಯಶಸ್ವಿಯಾಗಿದ್ದವು. ಆದರೆ, ಕಳೆದ ತಿಂಗಳು ಅನ್‌ಲಾಕ್‌ ಹಂತ ಆರಂಭಗೊಂಡ ಬಳಿಕ ಈ ರಾಜ್ಯಗಳಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.

ಗುಣಮುಖ ಆಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿರುವುದು ಆಶಾದಾಯಕ ಅಂಶ. ಈವರೆಗೆ, 6,33,417 ಮಂದಿ ಗುಣಮುಖರಾಗಿದ್ದಾರೆ. ಹಾಗಾಗಿ ದೇಶದಲ್ಲಿ ಈಗ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ 3,41,030. ಗುಣಮುಖ ಪ್ರಮಾಣವು ಶೇ 63.25ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.