ADVERTISEMENT

ಹಿಮಾಚಲ ಪ್ರದೇಶ‌ | ಮುಂದುವರಿದ ಭಾರಿ ಮಳೆ; 7 ಜಿಲ್ಲೆಗಳಿಗೆ ಪ್ರವಾಹದ ಎಚ್ಚರಿಕೆ

ಪಿಟಿಐ
Published 8 ಜುಲೈ 2025, 9:36 IST
Last Updated 8 ಜುಲೈ 2025, 9:36 IST
<div class="paragraphs"><p>ಹಿಮಾಚಲ ಪ‍್ರದೇಶದ ಮಂಡಿಯಲ್ಲಿ ಪ್ರವಾಹದಿಂದಾದ ಹಾನಿ</p></div>

ಹಿಮಾಚಲ ಪ‍್ರದೇಶದ ಮಂಡಿಯಲ್ಲಿ ಪ್ರವಾಹದಿಂದಾದ ಹಾನಿ

   

ಪಿಟಿಐ ಚಿತ್ರ

ಶಿಮ್ಲಾ: ಹಿಮಾಚಲ ಪ್ರದೇಶದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಏಳು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮುಂದಿನ 24 ಗಂಟೆಗಳವರೆಗೆ ಪ್ರವಾಹದ ಎಚ್ಚರಿಕೆ ನೀಡಿದೆ.

ADVERTISEMENT

ಚಂಬಾ, ಕಂಗ್ರಾ, ಮಂಡಿ, ಕುಲ್ಲು, ಶಿಮ್ಲಾ, ಸೋಲನ್, ಸಿರಾಮೌರ್‌ ಜಿಲ್ಲೆಗಳಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೆ ಮುಂದಿನ 7 ದಿನಗಳವರೆಗೆ ಯೆಲ್ಲೊ ಅಲರ್ಟ್‌ ಘೋಷಿಸಿದೆ. 

ಮಳೆಯಿಂದಾಗಿ 225 ರಸ್ತೆಗಳು ಬಂದ್ ಆಗಿವೆ. ಇದರಲ್ಲಿ ಪ್ರವಾಹ ಪೀಡಿತ ಮಂಡಿ ಜಿಲ್ಲೆಯ 153 ರಸ್ತೆಗಳೂ ಸೇರಿವೆ. ಜುಲೈ1 ರಿಂದ 8ರವರೆಗೆ ಹಿಮಾಚಲ ಪ್ರದೇಶದಲ್ಲಿ 203.2 ಮಿಲಿ ಮೀಟರ್ ಮಳೆಯಾಗಿದೆ. ಇದರಲ್ಲಿ ಮಂಡಿ ಜಿಲ್ಲೆಯೊಂದರಲ್ಲೇ ಶೇ 110ರಷ್ಟು ಮಳೆಯಾಗಿದ್ದು, ಶಿಮ್ಲಾದಲ್ಲಿ ಶೇ 89ರಷ್ಟು ಮಳೆಯಾಗಿದೆ.

ಹಿಮಾಚಲ ಪ್ರದೇಶದಲ್ಲಿ ಮಳೆಯಿಂದ ಸಂಭವಿಸಿದ ವಿವಿಧ ಅವಘಡಗಳಿಂದಾಗಿ ಈವರೆಗೆ 52 ಮಂದಿ ಮೃತಪಟ್ಟಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ನಾಪತ್ತೆಯಾದ ಹಲವರನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.