ADVERTISEMENT

‘ಝೈಕೋವ್‌-ಡಿ ಕೋವಿಡ್‌ ಲಸಿಕೆ: ಶೀಘ್ರ ಪೂರೈಕೆ’

ಪಿಟಿಐ
Published 21 ಆಗಸ್ಟ್ 2021, 14:52 IST
Last Updated 21 ಆಗಸ್ಟ್ 2021, 14:52 IST
ಲಸಿಕೆ
ಲಸಿಕೆ   

ನವದೆಹಲಿ: ಝೈಕೋವ್‌-ಡಿ ಕೋವಿಡ್‌ ಲಸಿಕೆಯನ್ನು ಸೆಪ್ಟೆಂಬರ್‌ ಅಂತ್ಯದೊಳಗೆ ಪೂರೈಕೆ ಮಾಡುವ ಸಾಧ್ಯತೆಯಿದ್ದು, ಮುಂದಿನ ಒಂದು ಅಥವಾ ಎರಡು ವಾರಗಳಲ್ಲಿ ಲಸಿಕೆಯ ಬೆಲೆಯನ್ನು ಘೋಷಿಸಲಾಗುವುದು ಎಂದು ಭಾರತದ ಝೈಡಸ್ ಕ್ಯಾಡಿಲಾ ಕಂಪನಿ ಶನಿವಾರ ತಿಳಿಸಿದೆ.

‘ಲಸಿಕೆಯ ಬೆಲೆ ಮತ್ತು ವಿತರಣಾ ವಿಧಾನದ ಸಂಬಂಧ ನಿಯಂತ್ರಕ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ’ ಎಂದು ಝೈಡಸ್ ಕ್ಯಾಡಿಲಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶರ್ವಿಲ್‌ ಪಟೇಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್‌ ವೇಳೆಗೆ ಒಂದು ಕೋಟಿ ಡೋಸ್ ಲಸಿಕೆ ಉತ್ಪಾದಿಸುವ ನಂಬಿಕೆಯಿದೆ. ಹಾಗಾದಲ್ಲಿ, ಜನವರಿ ಅಂತ್ಯದ ವೇಳೆಗೆ 4 ರಿಂದ 5 ಕೋಟಿ ಡೋಸ್‌ಗಳನ್ನು ಹೊಂದಬಹುದು ಎಂಬ ಭರವಸೆಯಿದೆ ಎಂದಿದ್ದಾರೆ.

ADVERTISEMENT

ಝೈಡಸ್ ಕ್ಯಾಡಿಲಾ ಸಂಸ್ಥೆಯ ಮೂರು ಡೋಸ್‌ಗಳ ಕೋವಿಡ್ -19 ಡಿಎನ್ಎ ಲಸಿಕೆಯನ್ನು ವಯಸ್ಕರು ಮತ್ತು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗಾಗಿ ಇತ್ತೀಚೆಗೆ ಅನುಮೋದನೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.