ADVERTISEMENT

ಪಾಂಡವ್‌ ಶೇರಾದಲ್ಲಿ ಸಿಲುಕಿದ್ದ ಮೂವರು ಚಾರಣಿಗರು ಸೇರಿ 7 ಮಂದಿಯ ರಕ್ಷಣೆ

ಪಿಟಿಐ
Published 30 ಮೇ 2022, 15:42 IST
Last Updated 30 ಮೇ 2022, 15:42 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ರುದ್ರಪ್ರಯಾಗ: ಉತ್ತರಾಖಂಡದರುದ್ರಪ್ರಯಾಗ ಜಿಲ್ಲೆಯ ಪಾಂಡವ್‌ ಶೇರಾದಲ್ಲಿಕಳೆದ ಕೆಲವು ದಿನಗಳಿಂದ ಸಿಲುಕಿದ್ದ ಮೂವರು ಚಾರಣಿಗರು ಸೇರಿದಂತೆ 7 ಮಂದಿಯನ್ನು ಭಾರತೀಯ ವಾಯುಪಡೆಯು ಸೋಮವಾರ ರಕ್ಷಿಸಿದೆ.

‘ಬೆಳಿಗ್ಗೆ 5.30ಕ್ಕೆ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, 6.45ರ ವೇಳೆಗೆ ಅವರನ್ನು ಹೆಲಿಕಾಫ್ಟರ್ ಮೂಲಕ ಗೌಚರ್‌ಗೆ ಕರೆತರಲಾಗಿದೆ’ ಎಂದು ರುದ್ರಪ್ರಯಾಗ ಜಿಲ್ಲೆಯ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಜ್ವರ್ ಅವರು ತಿಳಿಸಿದರು.

‘ಉತ್ತರ ಪ್ರದೇಶದ ಗಾಜಿಯಾಬಾದ್‌ನ ಶ್ರೀನಿವಾಸನ್, ಗೋರಖಪುರದ ಅಜಯ್ ಸಿಂಗ್, ಉತ್ತರಾಖಂಡದ ಪುರಿಯ ಜಿಲ್ಲೆಯ ಅಜಯ್‌ ನೇಗಿ ಚಾರಣಿಗರು. ಇನ್ನುಳಿದ ನಾಲ್ಕು ಮಂದಿ ಹಮಾಲಿಗಳಾಗಿದ್ದು, ಅವರು ರುದ್ರಪ್ರಯಾಗದಲ್ಲಿರುವ ತಮ್ಮ ಗ್ರಾಮ ರಸಿಗೆ ಹಿಂತಿರುಗಿದ್ದಾರೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ’ಎಂದು ಅವರು ಹೇಳಿದರು.

ADVERTISEMENT

‘ಆಡಳಿತ ಮಂಡಳಿಯಿಂದ ಅನುಮತಿ ಪಡೆಯದೇ ಈ ಏಳೂ ಮಂದಿ ಮೇ 21ರಂದು ಚಾರಣಕ್ಕಾಗಿ ಪಾಂಡವ್ ಶೇರಾಗೆ ತೆರಳಿದ್ದರು. ಕೆಟ್ಟ ಹವಾಮಾನ ಮತ್ತು ಮಳೆಯಿಂದಾಗಿ ಅಲ್ಲಿಯೇ ಸಿಲುಕಿದ್ದರು. ಅವರ ಬಳಿಯಿದ್ದ ಆಹಾರ–ನೀರು ಖಾಲಿಯಾದ್ದರಿಂದ ಹಮಾಲಿಗಳು ತಮ್ಮ ಗ್ರಾಮಸ್ಥರ ನೆರವಿನಿಂದ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಭಾನುವಾರದಿಂದಲೇ ಅವರಿಗಾಗಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.