ADVERTISEMENT

ರಾಜಸ್ಥಾನ: ‘ಮಿಗ್ 21’ ಯುದ್ಧ ವಿಮಾನ ಪತನ, ಪೈಲಟ್ ಸುರಕ್ಷಿತ

ಏಜೆನ್ಸೀಸ್
Published 8 ಮಾರ್ಚ್ 2019, 10:20 IST
Last Updated 8 ಮಾರ್ಚ್ 2019, 10:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಭಾರತೀಯ ವಾಯುಪಡೆಯ ‘ಮಿಗ್–21’ ಯುದ್ಧ ವಿಮಾನ ರಾಜಸ್ಥಾನದ ಬಿಕಾನೇರ್‌ ಬಳಿ ಶುಕ್ರವಾರ ಪತನವಾಗಿದೆ.

ಪೈಲಟ್ ಪ್ಯಾರಾಚೂಟ್ ನೆರವಿನಿಂದ ಸುರಕ್ಷಿತವಾಗಿ ಇಳಿದಿದ್ದಾರೆ ಎಂದು ಬಿಕಾನೇರ್ ಎಸ್‌ಪಿ ಹೇಳಿಕೆ ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಫೆಬ್ರುವರಿ 27ರಂದುಜಮ್ಮು ಮತ್ತು ಕಾಶ್ಮೀರದ ಬಡಗಾಂ ಜಿಲ್ಲೆಯಲ್ಲಿ ಗಸ್ತು ತಿರುಗುತ್ತಿದ್ದ ಮಿಗ್‌-21 ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು.

ADVERTISEMENT

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.