ADVERTISEMENT

ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಹೆಚ್ಚಿದ ಕಚ್ಚಾಬಾಂಬ್ ಬಳಕೆ: ಕಟ್ಟೆಚ್ಚರ

ಪಿಟಿಐ
Published 23 ಮಾರ್ಚ್ 2025, 12:37 IST
Last Updated 23 ಮಾರ್ಚ್ 2025, 12:37 IST
ಕಚ್ಚಾಬಾಂಬ್ –ಪಿಟಿಐ ಚಿತ್ರ
ಕಚ್ಚಾಬಾಂಬ್ –ಪಿಟಿಐ ಚಿತ್ರ   

ನವದೆಹಲಿ/ ರಾಯಪುರ: ಛತ್ತೀಸಗಢ, ಜಾರ್ಖಂಡ್‌ನ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಕಚ್ಚಾಬಾಂಬ್‌ಗಳು (ಐಇಡಿ) ದೊಡ್ಡ ಸಂಖ್ಯೆಯಲ್ಲಿ ಪತ್ತೆಯಾದ ಬಳಿಕ ಕಟ್ಟೆಚ್ಚರ ಘೋಷಿಸಲಾಗಿದೆ. 

ಬಿಯರ್‌ ಬಾಟಲ್‌ ಬಳಸಿ ಸಿದ್ಧಪಡಿಸಿದ ಕಚ್ಚಾಬಾಂಬ್‌ಗಳು ಹಾಗೂ ಸಣ್ಣ ಆ್ಯಂಟೆನಾ ಬಳಸಿ ರಿಮೋಟ್‌ ಕಂಟ್ರೋಲ್‌ನಿಂದ ಸ್ಫೋಟಿಸುವಂತಹ ವಸ್ತುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2026ರ ಮಾರ್ಚ್‌ ತಿಂಗಳ ಒಳಗಾಗಿ ಎಡಪಂಥೀಯ ಉಗ್ರವಾದವನ್ನು ತೊಡೆದುಹಾಕಲು ಕೇಂದ್ರ ಸರ್ಕಾರ ಗಡುವು ವಿಧಿಸಿದೆ. ಇದರ ಬೆನ್ನಲ್ಲೇ, ಭದ್ರತಾ ಪಡೆಗಳು ನಕ್ಸಲ್‌ ಪ್ರಾಬಲ್ಯ ಹೊಂದಿರುವ ಸ್ಥಳಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ್ದು,, ವಶಕ್ಕೆ ಪಡೆದ ಐಇಡಿಗಳ ಸಂಖ್ಯೆಯಲ್ಲಿ ಏರಿಕೆಯಾಗಿತ್ತು.

ADVERTISEMENT

‘ಭದ್ರತಾ ಪಡೆಗಳು ಛತ್ತೀಸಗಢದ ಬಸ್ತಾರ್‌ನಲ್ಲಿ ವಿಶೇಷ ಶಿಬಿರಗಳನ್ನು ಸ್ಥಾಪಿಸುತ್ತಿವೆ. ಇದರಿಂದ ನಕ್ಸಲರು– ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿ ನಡೆಯುವುದು ಕಡಿಮೆಯಾಗಿದ್ದು, ಶಸ್ತ್ರಾಸ್ತ್ರಗಳ ಸಂಗ್ರಹದ ಪ್ರಮಾಣದಲ್ಲೂ ಕುಸಿತ ಉಂಟಾಗಿದೆ. ಹೀಗಾಗಿ, ನಕ್ಸಲರು ಕಚ್ಚಾಬಾಂಬ್‌ಗಳ ಬಳಕೆಗೆ ಮುಂದಾಗಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.