ಬಂಧನ
(ಪ್ರಾತಿನಿಧಿಕ ಚಿತ್ರ)
ನವದೆಹಲಿ: ಅಕ್ರಮ ಕಾಲ್ ಸೆಂಟರ್‌ಗಳ ಮೂಲಕ ಅಮೆರಿಕದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಸೈಬರ್ ಅಪರಾಧ ಎಸಗಲಾಗುತ್ತಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಸಿಬಿಐ ಬಂಧಿಸಿದೆ.
ವಿಸಿ ಇನ್ಫ್ರೋಮೆಟ್ರಿಕ್ಸ್ ಪ್ರೈವೆಟ್ ಲಿಮಿಟೆಡ್ ನಡೆಸುತ್ತಿದ್ದ ಅಕ್ರಮ ಚಟುವಟಿಕೆಗಳ ಸೂತ್ರಧಾರ, ಆರೋಪಿ ವಿಕಾಸ್ ಕುಮಾರ್ ನಿಮರ್ ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಆತನನ್ನು ಕಳೆದ ವಾರ ಲಖನೌನಲ್ಲಿ ಬಂಧಿಸಲಾಯಿತು ಎಂದು ಸಿಬಿಐ ಸೋಮವಾರ ತಿಳಿಸಿದೆ.
‘ಲಖನೌದಲ್ಲಿನ ಆತನ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ಆತ ಇನ್ನೊಂದು ಕಾಲ್‌ಸೆಂಟರ್ ಮೂಲಕ ಅಮೆರಿಕದ ಪ್ರಜೆಗಳನ್ನು ಗುರಿಯಾಗಿಸಿಕೊಂಡಿರುವುದು ಪತ್ತೆಯಾಗಿದೆ. ಅಪರಾಧಗಳ ಕುರಿತ ಡಿಜಿಟಲ್ ಸಾಕ್ಷ್ಯವಿರುವ 52 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಸಿಬಿಐ ಪ್ರಕಟಣೆ ತಿಳಿಸಿದೆ.
ಹೈದರಾಬಾದ್, ಪುಣೆ ಮತ್ತು ವಿಶಾಖಪಟ್ಟಣದಿಂದ ಕಾರ್ಯಾಚರಿಸುತ್ತಿದ್ದ ನಾಲ್ಕು ಕಾಲ್ ಸೆಂಟರ್‌ಗಳ ವಿರುದ್ಧ 2024ರಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.