ವಡೋದರಾ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರಿಂದ ವಶಪಡಿಸಿಕೊಂಡ ಸುಮಾರು ₹ 88 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ಗುಜರಾತ್ ಪೊಲೀಸರು ಗುರುವಾರ ನಾಶಪಡಿಸಿದ್ದಾರೆ.
ಈ ಬಗ್ಗೆ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ) ಕರಣ್‌ರಾಜ್ ಸಿಂಗ್ ವಘೇಲಾ ಮಾಹಿತಿ ನೀಡಿದ್ದು, 2018 ಮಾರ್ಚ್‌ನಿಂದ 2020 ಅಕ್ಟೋಬರ್ ವರೆಗೆ ವಶಪಡಿಸಿದ 33,000ಕ್ಕೂ ಹೆಚ್ಚು ವಿದೇಶಿ ನಿರ್ಮಿತ ಮದ್ಯ ಬಾಟಲಿಗಳನ್ನು ಪೊಲೀಸರು ನಾಶಪಡಿಸಿದ್ದಾರೆ.
ಇದನ್ನೂ ಓದಿ:ಆಳ-ಅಗಲ: ಪ್ರಜಾಪ್ರಭುತ್ವಕ್ಕೆ ಹೊಸ ಮಂಟಪ; ನೂತನ ಸಂಸತ್ ಭವನ
ನಾವು 2018 ಮಾರ್ಚ್ ತಿಂಗಳಿಂದ 2020 ಅಕ್ಟೋಬರ್ ನಡುವೆ ಎರಡು ಪೊಲೀಸ್ ಠಾಣೆಗಳಿಂದ ವಶಪಡಿಸಿದ 33 ಸಾವಿರ ವಿದೇಶಿ ಮದ್ಯವನ್ನು ನಾಶಗೊಳಿಸಲಾಗಿದೆ.
ನಾಶವಾದ ವಿದೇಶಿ ಮದ್ಯವು 88 ಲಕ್ಷ ರೂ. ಮೌಲ್ಯವನ್ನು ಹೊಂದಿದೆ ಎಂದು ವಘೇಲಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.