ADVERTISEMENT

ಕರ್ನಾಟಕದಲ್ಲಿ ಶೇ.50ಕ್ಕೂ ಹೆಚ್ಚು ಮಂದಿಗೆ ಒಂದು ಡೋಸ್ ಕೋವಿಡ್ ಲಸಿಕೆ

ಡೆಕ್ಕನ್ ಹೆರಾಲ್ಡ್
Published 9 ಆಗಸ್ಟ್ 2021, 2:55 IST
Last Updated 9 ಆಗಸ್ಟ್ 2021, 2:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕರ್ನಾಟಕದಲ್ಲಿ ಕೋವಿಡ್ ಲಸಿಕೆ ನೀಡಲು ಉದ್ದೇಶಿಸಿರುವ ಜನಸಂಖ್ಯೆಯ ಶೇ 50ಕ್ಕಿಂತಲೂ ಹೆಚ್ಚಿನವರಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಲಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಹೀಗಿದ್ದರೂ, ಈ ವರ್ಷದ ಅಂತ್ಯದ ವೇಳೆಗೆ ನಿರೀಕ್ಷೆಯಂತೆ ರಾಜ್ಯವು ತನ್ನ ಲಸಿಕಾ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಗುವುದಿಲ್ಲ ಎನ್ನಲಾಗಿದೆ.

ಈ ಮೈಲಿಗಲ್ಲನ್ನು ಸಾಧಿಸಲು ಕರ್ನಾಟಕಕ್ಕೆ ಸರಿಸುಮಾರು ಆರೂವರೆ ತಿಂಗಳು ಬೇಕಾಗಿದೆ. ಹೆಚ್ಚುವರಿಯಾಗಿ ಮೊದಲ ಡೋಸ್ ನೀಡುವುದನ್ನು ಶೇಕಡಾವಾರು ಒಂದು ಪಾಯಿಂಟ್ ಹೆಚ್ಚಿಸಲು ರಾಜ್ಯವು 2 ರಿಂದ 4 ದಿನಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ, ಎರಡನೇ ಡೋಸ್ ನೀಡಿಕೆ ಪ್ರಮಾಣ ಶೇ 14.34ರಷ್ಟು ಮಾತ್ರವೇ ಇರುವುದು ಸರ್ಕಾರದ ಅಂಕಿಅಂಶಗಳಿಂದ ತಿಳಿದುಬಂದಿದೆ.

ಭಾನುವಾರ ಮಧ್ಯಾಹ್ನದವರೆಗೆ ರಾಜ್ಯದಲ್ಲಿ ಒಟ್ಟು 3.29 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. ಈ ಪೈಕಿ 2.57 ಕೋಟಿ ಮೊದಲ ಡೋಸ್‌ಗಳಾಗಿವೆ. ಉತ್ತಮ ಕಾರ್ಯಕ್ಷಮತೆ ಹೊಂದಿರುವ ಜಿಲ್ಲೆ ಬೆಂಗಳೂರು ನಗರ, ತನ್ನ ಉದ್ದೇಶಿತ 91 ಲಕ್ಷ ಜನಸಂಖ್ಯೆ ಪೈಕಿ ಶೇ 78ರಷ್ಟು ಜನರಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಿದೆ.

ADVERTISEMENT

ಲಸಿಕೆ ನೀಡಲು ಉದ್ದೇಶಿಸಿರುವ ಜನಸಂಖ್ಯೆಯು ಸರ್ಕಾರದ ಅಂಕಿ ಅಂಶಗಳ ಪ್ರಕಾರ 5.11 ಕೋಟಿಯಷ್ಟಿದೆ. ಈ ಪೈಕಿ ಶೇ 50.3ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ.

'ಸುಮಾರು ಶೇ. 80ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡುವ ಮೂಲಕ, ನಾವು ಉತ್ತಮ ಸ್ಥಾನದಲ್ಲಿದ್ದೇವೆ ಎಂದು ನಾವು ಭಾವಿಸುತ್ತೇವೆ'. ಸದ್ಯ ಶೇ 21.05ರಷ್ಟಿರುವ ಎರಡನೇ ಡೋಸ್ ಲಸಿಕೆ ನೀಡುವ ವ್ಯಾಪ್ತಿಯನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇ 40 -50ರಷ್ಟಕ್ಕೆ ಹೆಚ್ಚಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ಲಸಿಕೆ ನೀಡಿಕೆಯಲ್ಲಿ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದು, ರಾಜ್ಯದಲ್ಲಿಯೇ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ನೀಡಿಕೆಯಲ್ಲಿ ಹಿಂದುಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.