ADVERTISEMENT

Covid-19 India Update: 24 ಗಂಟೆಗಳಲ್ಲಿ 81,484 ಹೊಸ ಪ್ರಕರಣಗಳು

ಏಜೆನ್ಸೀಸ್
Published 2 ಅಕ್ಟೋಬರ್ 2020, 4:48 IST
Last Updated 2 ಅಕ್ಟೋಬರ್ 2020, 4:48 IST
ಮುಂಬೈನಲ್ಲಿ ಜನರು ವ್ಯಾಯಾಮ, ವಾಕಿಂಗ್‌ ಮಾಡುತ್ತಿರುವುದು
ಮುಂಬೈನಲ್ಲಿ ಜನರು ವ್ಯಾಯಾಮ, ವಾಕಿಂಗ್‌ ಮಾಡುತ್ತಿರುವುದು   

ಬೆಂಗಳೂರು: ದೇಶದಾದ್ಯಂತ ಕೋವಿಡ್‌ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 64 ಲಕ್ಷ ಸಮೀಪಿಸಿದೆ. ಕಳೆದ 24 ಗಂಟೆಗಳಲ್ಲಿ 81,484 ಹೊಸ ಪ್ರಕರಣಗಳು ದಾಖಲಾಗಿವೆ ಹಾಗೂ ಸೋಂಕಿನಿಂದ 1,095 ಮಂದಿ ಮೃತಪಟ್ಟಿದ್ದಾರೆ.

ಒಟ್ಟು 63,94,069 ಪ್ರಕರಣಗಳ ಪೈಕಿ 9,42,217 ಸಕ್ರಿಯ ಪ್ರಕರಣಗಳಿದ್ದು, 53,52,078 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ 99,773 ಮಂದಿ ಸಾವಿಗೀಡಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಅಕ್ಟೋಬರ್ 1ರವರೆಗೂ ದೇಶದಲ್ಲಿ 7,67,17,728 ಗಂಟಲು ದ್ರವ ಮಾದರಿಗಳಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಗುರುವಾರ ಒಂದೇ ದಿನ 10,97,947 ಕೋವಿಡ್‌ ಪರೀಕ್ಷೆಗಳನ್ನು ನಡೆಸಿರುವುದಾಗಿ ಐಸಿಎಂಆರ್‌ ತಿಳಿಸಿದೆ.

ADVERTISEMENT

ಮಹಾರಾಷ್ಟ್ರದಲ್ಲಿ 2,59,440 ಸಕ್ರಿಯ ಪ್ರಕರಣಗಳು, ಕರ್ನಾಟಕದಲ್ಲಿ 1,10,431 ಪ್ರಕರಣಗಳು, ಆಂಧ್ರ ಪ್ರದೇಶದಲ್ಲಿ 57,858 ಹಾಗೂ ಉತ್ತರ ಪ್ರದೇಶದಲ್ಲಿ 50,378 ಸಕ್ರಿಯ ಪ್ರಕರಣಗಳಿರುವುದಾಗಿ ಆರೋಗ್ಯ ಸಚಿವಾಲಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.