ADVERTISEMENT

Covid-19 India Update: 24 ಗಂಟೆಗಳಲ್ಲಿ 2.47 ಲಕ್ಷಕ್ಕೂ ಅಧಿಕ ಪ್ರಕರಣಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2022, 4:47 IST
Last Updated 13 ಜನವರಿ 2022, 4:47 IST
ಅಹಮದಾಬಾದ್‌ನ ಕೋವಿಡ್‌–19 ಆಸ್ಪತ್ರೆಯೊಂದರಲ್ಲಿ ಆರೋಗ್ಯ ಸಿಬ್ಬಂದಿ ಕೊರೊನಾ ಸೋಂಕಿತ ರೋಗಿಯನ್ನು ಕರೆದೊಯ್ಯುತ್ತಿರುವುದು
ಅಹಮದಾಬಾದ್‌ನ ಕೋವಿಡ್‌–19 ಆಸ್ಪತ್ರೆಯೊಂದರಲ್ಲಿ ಆರೋಗ್ಯ ಸಿಬ್ಬಂದಿ ಕೊರೊನಾ ಸೋಂಕಿತ ರೋಗಿಯನ್ನು ಕರೆದೊಯ್ಯುತ್ತಿರುವುದು   

ನವದೆಹಲಿ: ದೇಶದಾದ್ಯಂತ ಕೋವಿಡ್‌–19 ದೃಢ ಪ್ರಕರಣಗಳು ತೀವ್ರ ಏರುಗತಿಯಲ್ಲಿದ್ದು, ಗುರುವಾರ ಬೆಳಗ್ಗಿನ ವರೆಗೂ 24 ಗಂಟೆಗಳ ಅಂತರದಲ್ಲಿ 2,47,417 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 380 ಮಂದಿ ಸಾವಿಗೀಡಾಗಿದ್ದಾರೆ.

ನಿನ್ನೆಗೆ ಹೋಲಿಸಿದರೆ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡ 27ರಷ್ಟು ಹೆಚ್ಚಳವಾಗಿದ್ದು, ಕೋವಿಡ್‌ ದೃಢ ಪ್ರಮಾಣ ಶೇಕಡ 13.11ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 84,825 ಮಂದಿ ಗುಣಮುಖರಾಗಿದ್ದಾರೆ.

ಒಟ್ಟು ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ 5,488 ತಲುಪಿದೆ ಹಾಗೂ ಪ್ರಸ್ತುತ ದೇಶದಲ್ಲಿ 11,17,531 ಸಕ್ರಿಯ ಪ್ರಕರಣಗಳಿವೆ. ಒಟ್ಟು 3.63 ಕೋಟಿಗೂ ಅಧಿಕ ಪ್ರಕರಣಗಳ ಪೈಕಿ ಈವರೆಗೂ 4,85,035 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಮಹಾರಾಷ್ಟ್ರದಲ್ಲಿ ಅತ್ಯಧಿಕ 46,723 ಹೊಸ ಪ್ರಕರಣಗಳು, ದೆಹಲಿಯಲ್ಲಿ 27,561, ಪಶ್ಚಿಮ ಬಂಗಾಳದಲ್ಲಿ 22,155 ಹಾಗೂ ಕರ್ನಾಟಕದಲ್ಲಿ 21,390 ಪ್ರಕರಣಗಳು ವರದಿಯಾಗಿವೆ.

ದೇಶದಲ್ಲಿ ಈವರೆಗೂ 154.61 ಕೋಟಿಗೂ ಅಧಿಕ ಡೋಸ್‌ ಲಸಿಕೆ ಹಾಕಲಾಗಿದೆ.

ಇನ್ನಷ್ಟು ಓದು....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.