ಎಸ್. ಜೈಶಂಕರ್ (ಎಡಬದಿ)
(ಪಿಟಿಐ ಚಿತ್ರ)
ನವದೆಹಲಿ: ಭಾರತವು ಪಾಲುದಾರರನ್ನು ಎದುರು ನೋಡುತ್ತಿದೆಯೇ ವಿನಾ ಉಪದೇಶ ಮಾಡುವವರನ್ನಲ್ಲ. ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧ ವೃದ್ಧಿ ವಿಷಯದಲ್ಲಿ ಯುರೋಪ್ ಸಂವೇದನಾಶೀಲತೆ ಮತ್ತು ಸಮಾನ ಹಿತಾಸಕ್ತಿಯನ್ನು ವ್ಯಕ್ತಪಡಿಸಬೇಕೆಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಶನಿವಾರ ಹೇಳಿದರು.
ಆರ್ಕಟಿಕ್ ಸರ್ಕಲ್ ಇಂಡಿಯಾ ಫಾರಂನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ರಷ್ಯಾ ವಾಸ್ತವಿಕವಾದ’ವನ್ನು ಪ್ರತಿಪಾದಿಸಿದರು. ಭಾರತ ಮತ್ತು ರಷ್ಯಾ ಮಧ್ಯೆ ಸಂಪನ್ಮೂಲ ಪೂರೈಕೆದಾರ ಮತ್ತು ಗ್ರಾಹಕ ರಾಷ್ಟ್ರಗಳಾಗಿ ‘ಮಹತ್ವವಾದ ಮತ್ತು ಪರಸ್ಪರ ಪೂರಕ ಬಂಧ’ ಇದೆ ಎಂದು ಪ್ರತಿಪಾದಿಸಿದರು.
ರಷ್ಯಾವನ್ನು ಹೊರಗಿಟ್ಟು ರಷ್ಯಾ–ಉಕ್ರೇನ್ ಯುದ್ಧಕ್ಕೆ ಪರಿಹಾರ ಹುಡುಕಲು ಯತ್ನಿಸಿದ ಪಶ್ಚಿಮದ ದೇಶಗಳ ಯತ್ನವನ್ನು ಅವರು ಟೀಕಿಸಿದರು.
‘ರಷ್ಯಾದ ವಾಸ್ತವಿಕವಾದವನ್ನು ಪ್ರತಿಪಾದಿಸಿದಂತೆ, ಅಮೆರಿಕ ವಾಸ್ತವಿಕವಾದವನ್ನೂ ಪ್ರತಿಪಾದಿಸುವೆ’ ಎಂದರು.
ಯುರೋಪ್‌ನಿಂದ ನಿರೀಕ್ಷೆಗಳು ಏನು ಎಂದು ಕೇಳಿದಾಗ, ‘ನಾವು ಪಾಲುದಾರರ ಹುಡುಕಾಟದಲ್ಲಿದ್ದೇವೆ; ಉಪದೇಶ ಮಾಡುವವರನ್ನಲ್ಲ. ಪಾಲುದಾರ ರಾಷ್ಟ್ರಗಳ ನಡುವೆ ಮಧ್ಯೆ ಸಂವೇದನಾಶೀಲತೆ, ಸಮಾನ ಹಿತಾಸಕ್ತಿ ಇರಬೇಕು. ಜಗತ್ತು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಜ್ಞಾನ ಇರಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.