ADVERTISEMENT

ಈಶಾನ್ಯ ಪ್ರಾಂತ್ಯವು ಹಿಂದುಳಿದರೆ, ಭಾರತವೂ ಹಿಂದುಳಿಯುತ್ತದೆ: ವೆಂಕಯ್ಯ ನಾಯ್ಡು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 1:52 IST
Last Updated 5 ಅಕ್ಟೋಬರ್ 2021, 1:52 IST
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು   

ಶಿಲ್ಲಾಂಗ್:‌ಈಶಾನ್ಯ ಭಾರತವನ್ನು ವೇಗದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ʼಈಶಾನ್ಯ ಮಂಡಳಿʼಗೆ ಸಲಹೆ ನೀಡಿದ್ದಾರೆ.

ʼಈಶಾನ್ಯ ಪ್ರಾಂತ್ಯದ ಅಭಿವೃದ್ಧಿಯಲ್ಲಿ ಈಶಾನ್ಯ ಮಂಡಳಿಯ ಪಾತ್ರʼ ಕುರಿತಂತೆ ಶಿಲ್ಲಾಂಗ್‌ನಲ್ಲಿ ನಡೆದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು,ವಿವಿಧ ಪ್ರದೇಶಗಳ ಅಭಿವೃದ್ಧಿಯಲ್ಲಿ ಸಮತೋಲನ ಸಾಧ್ಯವಾಗದಿದ್ದರೆ ಭಾರತದ ಅಭಿವೃದ್ಧಿಯು ಪರಿಪೂರ್ಣವಾಗದುʼ ಎಂದು ತಿಳಿಸಿದ್ದಾರೆ.

ʼಈಶಾನ್ಯ ಪ್ರಾಂತ್ಯವು ಪ್ರಗತಿ ಹೊಂದಿದರೆ, ಭಾರತವೂ ಪ್ರಗತಿ ಸಾಧಿಸುತ್ತದೆ. ಈ ಪ್ರದೇಶ ಹಿಂದುಳಿದರೆ ದೇಶವೂ ಹಿಂದುಳಿಯುತ್ತದೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಮುಂದುವರಿದು,ʼದೇಶವು ಟೀಂ ಇಂಡಿಯಾವಾಗಿ ಕಾರ್ಯನಿರ್ವಹಿಸಬೇಕು. ಅಭಿವೃದ್ಧಿ ವಿಚಾರಗಳಲ್ಲಿ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿ ಪರಿಹಾರಗಳನ್ನು ಕಂಡುಕೊಳ್ಳಬೇಕುʼ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.