ADVERTISEMENT

ಭಾರತ–ಮಾಲ್ಡೀವ್ಸ್‌ ದ್ವಿಪಕ್ಷೀಯ ಮಾತುಕತೆ

ಪಿಟಿಐ
Published 13 ಡಿಸೆಂಬರ್ 2019, 20:15 IST
Last Updated 13 ಡಿಸೆಂಬರ್ 2019, 20:15 IST
ಒಪ್ಪಂದಕ್ಕೆ ಸಹಿ ಹಾಕಿದ ಕಡತಗಳನ್ನು ಜೈಶಂಕರ್‌ ಹಾಗೂ ಅಬ್ದುಲ್ಲ ಶಾಹಿದ್‌ ಪರಸ್ಪರ ಹಸ್ತಾಂತರಿಸಿದರು
ಒಪ್ಪಂದಕ್ಕೆ ಸಹಿ ಹಾಕಿದ ಕಡತಗಳನ್ನು ಜೈಶಂಕರ್‌ ಹಾಗೂ ಅಬ್ದುಲ್ಲ ಶಾಹಿದ್‌ ಪರಸ್ಪರ ಹಸ್ತಾಂತರಿಸಿದರು   

ನವದೆಹಲಿ:ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಸದೃಢಗೊಳಿಸುವ ಉದ್ದೇಶದಿಂದ ವಿದೇಶಾಂಗ ಸಚಿವ ಜೈಶಂಕರ್‌ ಮಾಲ್ಡೀವ್ಸ್‌ ವಿದೇಶಾಂಗ ಸಚಿವ ಅಬ್ದುಲ್ಲ ಶಾಹಿದ್‌ ಅವರ ಜೊತೆ ಸಭೆ ನಡೆಸಿದರು.

ನಾಲ್ಕು ವರ್ಷಗಳ ಬಳಿಕ ಉಭಯ ದೇಶಗಳ ನಡುವೆ ಜಂಟಿ ಆಯೋಗ ಸಭೆ (ಜೆಸಿಎಂ)ನಡೆಯುತ್ತಿದೆ. ಮಾಲ್ಡೀವ್ಸ್‌ ಸರ್ಕಾರದ ಹಿರಿಯ ಸಚಿವರು, ಅಧಿಕಾರಿಗಳು ಸೇರಿ 31 ಜನರ ನಿಯೋಗ ಭಾರತಕ್ಕೆ ಆಗಮಿಸಿದ್ದು, ಇದರ ನೇತೃತ್ವವನ್ನು ಶಾಹಿದ್‌ ಅವರು ವಹಿಸಿದ್ದಾರೆ.

‘ವಿದೇಶಾಂಗ ಸಚಿವರಿಗೆ ಹಾರ್ದಿಕ ಸ್ವಾಗತ. ಆಯೋಗದ ಸಭೆಯ ನಂತರ ಭಾರತ ಮತ್ತು ಮಾಲ್ಡೀವ್ಸ್‌ ನಡುವಿನ ಸಹಕಾರ ಹೊಸ ಉತ್ತುಂಗಕ್ಕೇರಲಿದೆ’ ಎಂದು ಜೈಶಂಕರ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಮಾಲ್ಡೀವ್ಸ್‌ ಅಭಿವೃದ್ಧಿಗಾಗಿ ಸಹಕಾರ ನೀಡಲು ಭಾರತ ಬದ್ಧವಾಗಿದೆ’ ಎಂದು ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಮೋದಿ, ಜೂನ್‌ನಲ್ಲಿ ಮಾಲ್ಡೀವ್ಸ್‌ಗೆ ಪ್ರವಾಸ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.