ADVERTISEMENT

Covid-19 India Update: ಕೋವಿಡ್‌ ಪ್ರಕರಣಗಳಲ್ಲಿ ಬ್ರೆಜಿಲ್‌ ಮೀರಿಸಿದ ಭಾರತ!

ಏಜೆನ್ಸೀಸ್
Published 12 ಏಪ್ರಿಲ್ 2021, 5:06 IST
Last Updated 12 ಏಪ್ರಿಲ್ 2021, 5:06 IST
ಮುಂಬೈ ಮೀನು ಮಾರುಕಟ್ಟೆಯಲ್ಲಿ ಸೇರಿರುವ ಜನರು
ಮುಂಬೈ ಮೀನು ಮಾರುಕಟ್ಟೆಯಲ್ಲಿ ಸೇರಿರುವ ಜನರು   

ನವದೆಹಲಿ: ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತೆ ಏರುಗತಿಯಲ್ಲಿ ಸಾಗಿದೆ. 24 ಗಂಟೆಗಳ ಅಂತರದಲ್ಲಿ ಕೋವಿಡ್‌–19 ದೃಢಪಟ್ಟ 1,68,912 ಹೊಸ ಪ್ರಕರಣಗಳು ದಾಖಲಾಗಿವೆ, ಇದೇ ಅವಧಿಯಲ್ಲಿ 904 ಮಂದಿ ಸಾವಿಗೀಡಾಗಿದ್ದಾರೆ.

ಸೋಮವಾರ ಬೆಳಗ್ಗಿನ ವರೆಗೂ 75,086 ಮಂದಿ ಕೊರೊನಾ ವೈರಸ್‌ ಸೋಂಕಿನಿಂದ ಗುಣಮುಖರಾಗಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯಿಂದ ತಿಳಿದು ಬಂದಿದೆ.

ಪ್ರಸ್ತುತ ದೇಶದಲ್ಲಿ 12,01,009 ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 1,35,27,717ಕ್ಕೆ ಏರಿಕೆಯಾಗಿದ್ದು, ಈ ಪೈಕಿ 1,21,56,529 ಮಂದಿ ಗುಣಮುಖರಾಗಿದ್ದಾರೆ ಹಾಗೂ 1,70,179 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಒಟ್ಟು ಪ್ರಕರಣಗಳ ಪಟ್ಟಿಯಲ್ಲಿ ಬ್ರೆಜಿಲ್‌ ಹಿಂದಕ್ಕಿಟ್ಟು ಭಾರತ ಎರಡನೇ ಸ್ಥಾನಕ್ಕೇರಿದೆ. ಬ್ರೆಜಿಲ್‌ನಲ್ಲಿ ಒಟ್ಟು 1,34,82,543 ಪ್ರಕರಣಗಳು ದಾಖಲಾಗಿವೆ.

ದೇಶದಾದ್ಯಂತ ಈವರೆಗೂ 10.45 ಕೋಟಿಗೂ ಅಧಿಕ ಡೋಸ್‌ಗಳಷ್ಟು ಲಸಿಕೆ ಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.