ADVERTISEMENT

ಭಾರತ–ರಷ್ಯಾ ನಡುವೆ ಎಕೆ–47 203 ರೈಫಲ್‌ ಒಪ್ಪಂದ ಅಂತಿಮ

ಭಾರತದಲ್ಲೇ ಅಂದಾಜು 6.70 ಲಕ್ಷ ರೈಫಲ್‌ ಉತ್ಪಾದನೆ

ಪಿಟಿಐ
Published 3 ಸೆಪ್ಟೆಂಬರ್ 2020, 15:11 IST
Last Updated 3 ಸೆಪ್ಟೆಂಬರ್ 2020, 15:11 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಮಾಸ್ಕೊ: ಭಾರತದಲ್ಲೇ ಎ.ಕೆ.–47 ರೈಫಲ್‌ನ ಅತ್ಯಾಧುನಿಕ ಮಾದರಿ ಆಗಿರುವ ಎ.ಕೆ.–47 203 ಉತ್ಪಾದನೆಯ ಪ್ರಮುಖ ಒಪ್ಪಂದವನ್ನುರಕ್ಷಣಾ ಸಚಿವ ರಾಜ‌ನಾಥ್‌ ಸಿಂಗ್‌ ಭೇಟಿ ವೇಳೆ ಭಾರತ ಹಾಗೂ ರಷ್ಯಾ ಗುರುವಾರ ಅಂತಿಮಗೊಳಿಸಿದೆ.

1996 ರಿಂದ ಭಾರತೀಯ ಸೇನೆಯ ಬಳಿ ಇರುವಂಥ ಇನ್ಸಾಸ್ ರೈಫಲ್‌ಗಳ ಬದಲಾಗಿ ಎ.ಕೆ.–47 203 ರೈಫಲ್‌ಗಳನ್ನು ಬಳಸಲು ಭಾರತ ನಿರ್ಧರಿಸಿದೆ. ಭಾರತಕ್ಕೆ 7,70,000 ಎಕೆ–47 203 ರೈಫಲ್‌ಗಳ ಅಗತ್ಯ ಇದ್ದು, ಈ ಪೈಕಿ 1 ಲಕ್ಷ ರೈಫಲ್‌ಗಳನ್ನು ಆಮದು ಮಾಡಿಕೊಂಡು, ಉಳಿದವುಗಳನ್ನು ಭಾರತದಲ್ಲೇ ಉತ್ಪಾದಿಸಲಾಗುವುದು ಎಂದು ರಷ್ಯಾದ ಸ್ಪುಟ್ನಿಕ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ಇಂಡೊ–ರಷ್ಯಾ ರೈಫಲ್ಸ್‌ ಪ್ರೈವೇಟ್‌ ಲಿ.’ ಭಾಗವಾಗಿ ಎ.ಕೆ.–47 203 ರೈಫಲ್‌ಗಳನ್ನು ಉತ್ಪಾದಿಸಲಾಗುವುದು. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದಲ್ಲಿ ಉದ್ಘಾಟಿಸಿದ್ದ ಕೊರಾವ್‌ ಆರ್ಡಿನೆನ್ಸ್‌ ಕಾರ್ಖಾನೆಯಲ್ಲಿ ಇವುಗಳು ತಯಾರಾಗಲಿವೆ. ತಂತ್ರಜ್ಞಾನ ಹಸ್ತಾಂತರ, ಉತ್ಪಾದನಾ ಘಟಕ ಸ್ಥಾಪನೆ ಸೇರಿದಂತೆ ಪ್ರತಿ ರೈಫಲ್‌ ಉತ್ಪಾದನೆಗೆ ಅಂದಾಜು ₹80,300 ವೆಚ್ಚವಾಗಲಿದೆ ಎಂದು ವರದಿ ಉಲ್ಲೇಖಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.