ನವದೆಹಲಿ: ಅಮೆರಿಕದ ವಿರೋಧದ ನಡುವೆಯೂ ‘ಎಸ್–400’ ವಾಯುರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಭಾರತಕ್ಕೆ ಪೂರೈಸುವ ಪ್ರಕ್ರಿಯೆಯನ್ನು ರಷ್ಯಾ ಆರಂಭಿಸಿದೆ.
ಈ ತಿಂಗಳು ಪೂರೈಕೆ ಆರಂಭಗೊಂಡಿದ್ದು, ಇದು ಮುಂದುವರಿಯಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ.
ರಷ್ಯಾ ಜತೆಗಿನ ಸೇನಾ ತಾಂತ್ರಿಕ ಸಹಕಾರ ವಿಸ್ತರಣೆ ಒಪ್ಪಂದ ಮತ್ತು ರಕ್ಷಣಾ ಸಹಕಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರವು ಸೋಮವಾರ ಸಹಿ ಹಾಕಿದ ಬೆನ್ನಲ್ಲೇ ಅವರು ಈ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.