ADVERTISEMENT

ಅಮೆರಿಕದಿಂದ ನಿರ್ಬಂಧಕ್ಕೊಳಗಾದ ಇರಾನ್ ಟ್ಯಾಂಕರ್‌ ಹಡಗುಗಳನ್ನು ವಶಪಡಿಸಿಕೊಂಡ ಭಾರತ

ಏಜೆನ್ಸೀಸ್
Published 17 ಫೆಬ್ರುವರಿ 2026, 5:54 IST
Last Updated 17 ಫೆಬ್ರುವರಿ 2026, 5:54 IST
   

ನವದೆಹಲಿ: ಅಮೆರಿಕದಿಂದ ನಿರ್ಬಂಧಕ್ಕೊಳಗಾಗಿರುವ ಇರಾನ್‌ನ ಟ್ಯಾಂಕರ್‌ ಹಡಗುಗಳನ್ನು ಭಾರತದ ಕಡಲ ವಲಯದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಭಾರತ ಮತ್ತು ಅಮೆರಿಕ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ನಂತರ, ಭಾರತದ ಕಡಲ ವಲಯದಲ್ಲಿ ಅಕ್ರಮ ವ್ಯಾಪಾರವನ್ನು ತಡೆಯಲು ಭಾರಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಭಾರತೀಯ ಕಡಲ ರಕ್ಷಣಾ ಪಡೆಯು 55 ಹಡಗು,10 ರಿಂದ 12 ವಿಮಾನಗಳನ್ನು ಕಣ್ಗಾವಲಿಗೆ ಬಳಸುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಇತ್ತೀಚೆಗೆ ಅಮೆರಿಕವು ಭಾರತದಿಂದ ರಫ್ತಾಗುವ ವಸ್ತುಗಳ ಮೇಲಿನ ಸುಂಕವನ್ನು ಶೇ.50ರಿಂದ ಶೇ.18ಕ್ಕೆ ಇಳಿಸಿತ್ತು.

ADVERTISEMENT

‘ಮುಂಬೈನಿಂದ ನೂರು ನಾಟಿಕಲ್ ಮೈಲಿ ದೂರದಲ್ಲಿ ಭಾರತದ ಕಡಲ ವಲಯದೊಳಗೆ ಅನುಮಾನಸ್ಪದ ಘಟನೆಯ ಹಿನ್ನಲೆಯಲ್ಲಿ ಟ್ಯಾಂಕರ್‌ ಹಡಗುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಫೆ.6ರಂದು ಭಾರತೀಯ ಅಧಿಕಾರಿಗಳು ಪೋಸ್ಟ್ ಮಾಡಿದ್ದರು. ಆದರೆ, ನಂತರ ಅದನ್ನು ಡಿಲೀಟ್ ಮಾಡಲಾಗಿತ್ತು.

ಹೆಚ್ಚಿನ ತನಿಖೆಗಾಗಿ ಆ ಟ್ಯಾಂಕರ್‌ ಹಡಗುಗಳನ್ನು ವಶಪಡಿಸಿಕೊಂಡು, ಮುಂಬೈಗೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಟ್ಯಾಂಕರ್‌ ಹಡಗುಗಳನ್ನು ಸ್ಟೆಲ್ಲರ್ ರೂಬಿ, ಆಸ್ಫಾಲ್ಟ್ ಸ್ಟಾರ್ ಹಾಗೂ ಅಲ್ ಜಾಫ್ಜಿಯಾ ಎಂದು ಗುರುತಿಸಲಾಗಿದೆ. ಈ ಹಡಗುಗಳು ತಮ್ಮ ಗುರುತನ್ನು ಮರೆಮಾಚಿಕೊಂಡು, ಕಾನೂನುಗಳನ್ನು ಉಲ್ಲಂಘಿಸಿ ಕಡಲನ್ನು ಅಕ್ರಮ ಪ್ರವೇಶ ಮಾಡುವ ಪ್ರಯತ್ನ ಮಾಡುತ್ತಿದ್ದವು ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.