ADVERTISEMENT

ಸೂಪರ್‌ ಸಾನಿಕ್‌ ಕ್ಷಿಪಣಿ ಉಡಾವಣೆ ಯಶಸ್ವಿ

ಪಿಟಿಐ
Published 13 ಡಿಸೆಂಬರ್ 2021, 13:41 IST
Last Updated 13 ಡಿಸೆಂಬರ್ 2021, 13:41 IST
ಸೂಪರ್‌ ಸಾನಿಕ್‌ ಕ್ಷಿಪಣಿಯನ್ನು ಒಡಿಶಾ ಕರಾವಳಿಯ ಅಬ್ದುಲ್‌ ಕಲಾಂ ದ್ವೀಪ ಪ್ರದೇಶದಿಂದ ಸೋಮವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು
ಸೂಪರ್‌ ಸಾನಿಕ್‌ ಕ್ಷಿಪಣಿಯನ್ನು ಒಡಿಶಾ ಕರಾವಳಿಯ ಅಬ್ದುಲ್‌ ಕಲಾಂ ದ್ವೀಪ ಪ್ರದೇಶದಿಂದ ಸೋಮವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು   

ಬಾಲಾಸೋರ್, ಒಡಿಶಾ: ನೌಕಾ ಸ್ಫೋಟಕ ಬೆಂಬಲಿತ ಸೂಪರ್‌ಸಾನಿಕ್ ಕ್ಷಿಪಣಿಯನ್ನು (ಎಸ್‌ಎಂಎಟಿ) ಇಲ್ಲಿನ ಕರಾವಳಿಯ ಅಬ್ದುಲ್‌ ಕಲಾಂ ದ್ವೀಪದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ಉಡಾವಣೆಯ ಸಂದರ್ಭದಲ್ಲಿ ಈ ಕ್ಷಿಪಣಿಯ ಪೂರ್ಣ ಸಾಮರ್ಥ್ಯದ ಪ್ರಾತ್ಯಕ್ಷಿಕೆಯೂ ನಡೆಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ತಿಳಿಸಿದೆ.

ಜಲಾಂತರ್ಗಾಮಿ ಯುದ್ಧನೌಕೆಯ ಸಾಮರ್ಥ್ಯ ವೃದ್ಧಿಗೆ ಪೂರಕ ವ್ಯವಸ್ಥೆಯನ್ನು ಎಸ್‌ಎಂಎಟಿಯಲ್ಲಿ ಅಳವಡಿಸಲಾಗಿದೆ.ಉಡಾವಣೆ ಸಂದರ್ಭದಲ್ಲಿ ಕ್ಷಿಪಣಿಯ ಮೇಲ್ವಿಚಾರಣೆಯನ್ನು ಎಲೆಕ್ಟ್ರೋ ಆಪ್ಟಿಕ್ ಟೆಲಿಮೆಟ್ರಿ ವ್ಯವಸ್ಥೆ, ರಾಡಾರ್‌ ಬಳಸಿ ನಡೆಸಲಾಯಿತು ಎಂದು ತಿಳಿಸಿದೆ.

ADVERTISEMENT

ಕ್ಷಿಪಣಿಯು ನೌಕಾಸ್ಫೋಟಕ ಹೊಂದಿದ್ದು, ಪ್ಯಾರಾಚೂಟ್‌ ಮತ್ತು ಸ್ಫೋಟಕ ಬಿಡುಗಡೆ ಮಾಡುವ ವ್ಯವಸ್ಥೆಯನ್ನು ಒಳಗೊಂಡಿದೆ ಎಂದು ಡಿಆರ್‌ಡಿಒ ಹೇಳಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.