ADVERTISEMENT

ಒಡಿಶಾ: ಅಗ್ನಿ ಪ್ರೈಂ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಪಿಟಿಐ
Published 28 ಜೂನ್ 2021, 10:52 IST
Last Updated 28 ಜೂನ್ 2021, 10:52 IST
ಒಡಿಶಾದ ಬಾಲಸೊರ್‌ನ ಕರಾವಳಿ ಪ್ರದೇಶದಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ದ್ವಿಪದಿಂದ ಸೋಮವಾರ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಹೊಸ ತಲೆಮಾರಿನ ಅಣ್ವಸ್ತ್ರ ಹೊತ್ತೊಯ್ಯಬಲ್ಲ ‘ಅಗ್ನಿ ಪ್ರೈಂ‘ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಒಡಿಶಾದ ಬಾಲಸೊರ್‌ನ ಕರಾವಳಿ ಪ್ರದೇಶದಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ದ್ವಿಪದಿಂದ ಸೋಮವಾರ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಹೊಸ ತಲೆಮಾರಿನ ಅಣ್ವಸ್ತ್ರ ಹೊತ್ತೊಯ್ಯಬಲ್ಲ ‘ಅಗ್ನಿ ಪ್ರೈಂ‘ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.   

ಬಾಲಸೊರ್‌(ಒಡಿಶಾ): ಇಲ್ಲಿನ ಕರಾವಳಿಯ ಸೇನಾ ನೆಲೆಯಲ್ಲಿ ಸೋಮವಾರ ಹೊಸ ತಲೆಮಾರಿನ ‌ಅತ್ಯಾಧುನಿಕ ರೂಪಾಂತರಿ ಕ್ಷಿಪಣಿ ‘ಅಗ್ನಿ ಪ್ರೈಮ್‌‘ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಯಿತು.

2 ಸಾವಿರ ಕಿ.ಮೀ ದೂರ ಕ್ರಮಿಸುವ ಸಾಮರ್ಥ್ಯವಿರುವ ಈ ಕ್ಷಿಪಣಿಯನ್ನು ಒಡಿಶಾ ಕರಾವಳಿ ತೀರದಲ್ಲಿರುವ ಅಬ್ದುಲ್ ಕಲಾಂ ದ್ವೀಪದಿಂದ ಬೆಳಿಗ್ಗೆ 10.55ಕ್ಕೆ ಸಂಚಾರಿ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ಡಿಆರ್‌ಡಿಒ ಮೂಲಗಳು ತಿಳಿಸಿವೆ.

ಅಣ್ವಸ್ತ್ರ ಹೊತ್ತೊಯ್ಯುವಂತಹ ಸಾಮರ್ಥ್ಯವಿರುವ ಈ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.