ADVERTISEMENT

ಬೈಡನ್–ಕಮಲಾ ಭಾರತೀಯರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ: ಭಾರತೀಯ ಸಮುದಾಯ

ಭಾರತೀಯ ಅಮೆರಿಕನ್ ಸಮುದಾಯದವರ ಅಭಿಮತ

ಪಿಟಿಐ
Published 24 ಅಕ್ಟೋಬರ್ 2020, 8:11 IST
Last Updated 24 ಅಕ್ಟೋಬರ್ 2020, 8:11 IST
ಡೆಮಾಕ್ರಟಿಕ್‌ ಪಕ್ಷದ ಆಭ್ಯರ್ಥಿಗಳಾದ ಜೋ ಬೈಡೆನ್‌ ಮತ್ತು ಕಮಲಾ ಹ್ಯಾರಿಸ್‌ (ರಾಯಿಟರ್ಸ್‌)
ಡೆಮಾಕ್ರಟಿಕ್‌ ಪಕ್ಷದ ಆಭ್ಯರ್ಥಿಗಳಾದ ಜೋ ಬೈಡೆನ್‌ ಮತ್ತು ಕಮಲಾ ಹ್ಯಾರಿಸ್‌ (ರಾಯಿಟರ್ಸ್‌)   

ವಾಷಿಂಗ್ಟನ್‌: ‘ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳಾದ ಜೊ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರು ಇಲ್ಲಿ ನೆಲೆಸಿರುವ ಭಾರತೀಯರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಟೀಕಿಸುತ್ತಾರೆ. ಅವರು ನಮ್ಮ ಪಾಲಿನ ಶತ್ರು’ ಎಂದು ಅಮೆರಿಕದ ವಿವಿಧೆಡೆಗಳಲ್ಲಿರುವ ಭಾರತೀಯ ಸಮುದಾಯದವರು ಹೇಳಿದ್ದಾರೆ.

ಈ ಹಿಂದೆ ಸಂಸದರಾಗಿದ್ದಾಗ, ಅಮೆರಿಕದ ಉಪಾಧ್ಯಕ್ಷರಾಗಿದ್ದಾಗ ಬೈಡನ್‌ ಅವರು ಭಾರತೀಯರಿಗೆ ನೆರವಾಗಿದ್ದಾರೆ. ಹೀಗಾಗಿ ನವೆಂಬರ್‌ 3ರಂದ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್‌ ಅವರನ್ನೇ ಬೆಂಬಲಿಸಲು ನಿರ್ಧರಿಸಿದ್ದಾಗಿ ಭಾರತೀಯರು ಹೇಳಿದ್ದಾರೆ.

‘ಟ್ರಂಪ್ ಆಡಳಿತದ ನಾಲ್ಕು ವರ್ಷಗಳ ನಂತರವೂ ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ನಮಗೆ ದೊರಕಿದಷ್ಟು ಅವಕಾಶಗಳು ಸಿಗಲಿಲ್ಲ. ಮುಂದೆ, ನಮ್ಮ ಸಮುದಾಯ, ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ನಮ್ಮ ಕಠಿಣ ಪರಿಶ್ರಮವನ್ನು ಮೆಚ್ಚುವ ಮತ್ತು ಸಮಾನ ಅವಕಾಶವನ್ನು ನೀಡುವ ನಾಯಕ ನಮಗೆ ಬೇಕು’ ಎಂದು ಸಿಲಿಕಾನ್ ವ್ಯಾಲಿ ಮೂಲದ ಉದ್ಯಮಿ ಅಜಯ್ ಜೈನ್ ಭುಟೋರಿಯಾ ಹೇಳಿದರು.

ADVERTISEMENT

‘ಬೈಡನ್ ಹಾಗೂ ಕಮಲಾ ಹ್ಯಾರಿಸ್‌ ಅವರು ಅಮೆರಿಕವನ್ನು ಈಗಿರುವ ಸಂಕಷ್ಟದಿಂದ ಪಾರು ಮಾಡಿ, ಮಧ್ಯಮ ವರ್ಗದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಬಲ್ಲರು. ಜಾಗತಿಕಮಟ್ಟದಲ್ಲಿ ಅಮೆರಿಕದ ನಾಯಕತ್ವವನ್ನುಪುನಃ ಸ್ಥಾಪಿಸುತ್ತಾರೆ. ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಭುಟೋರಿಯಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.