ADVERTISEMENT

ಹಾಕಿ ದಿಗ್ಗಜ ಬಲ್ಬೀರ್‌ ಸಿಂಗ್‌ ಆರೋಗ್ಯ ಸ್ಥಿತಿ ಗಂಭೀರ: ಐಸಿಯುಗೆ ದಾಖಲು

ಏಜೆನ್ಸೀಸ್
Published 4 ಅಕ್ಟೋಬರ್ 2018, 3:38 IST
Last Updated 4 ಅಕ್ಟೋಬರ್ 2018, 3:38 IST
   

ಚಂಡೀಗಡ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಭಾರತೀಯ ಹಾಕಿ ದಿಗ್ಗಜ ಬಲ್ಬೀರ್‌ ಸಿಂಗ್‌ ಅವರನ್ನು ಇಲ್ಲಿನ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯತೀವ್ರ ನಿಗಾ ಘಟಕದಲ್ಲಿ(ಐಸಿಯು) ದಾಖಲಿಸಲಾಗಿದೆ.

ಸಿಂಗ್‌ ಅವರಿಗೆ ಅಕ್ಟೋಬರ್‌ 1 ರಿಂದಲೂ ಚಿಕಿತ್ಸೆ ಮುಂದುವರಿದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

‘ಸಿಂಗ್‌ ಅವರ ಸ್ಥಿತಿ ಗಂಭೀರವಾಗಿದ್ದು,ಐಸಿಯುಗೆ ದಾಖಲಿಸಲಾಗಿದೆ. ಹೃದಯ ಬಡಿತವು ನಿಧಾನವಾಗಿದ್ದು, ರಕ್ತದೊತ್ತಡವೂ ತುಂಬಾ ಕಡಿಮೆಯಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಸಿಂಗ್‌,1948ರಲ್ಲಿ ಲಂಡನ್‌ನಲ್ಲಿ ಹಾಗೂ 1952ರಲ್ಲಿ ಹೆಲ್ಸಿಂಕಿಯಲ್ಲಿ(ಫಿನ್‌ಲ್ಯಾಂಡ್‌),1956ರ ಮೆಲ್ಬರ್ನ್‌(ಆಸ್ಟ‌್ರೇಲಿಯಾ)ದಲ್ಲಿನಡೆದ ಒಲಿಂಪಿಕ್ಸ್‌ ಕ್ರೀಡಾಕೂಟಗಳಲ್ಲಿ ಚಿನ್ನಗೆದ್ದ ಭಾರತ ಹಾಕಿ ತಂಡದಲ್ಲಿದ್ದರು. ಮೆಲ್ಬೋರ್ನ್‌ಒಲಿಂಪಿಕ್ಸ್‌ನಲ್ಲಿ ಸಿಂಗ್‌, ತಂಡ ಮುನ್ನಡೆಸಿದ್ದರು.

1957ರಲ್ಲಿ ಪದ್ಮಶ್ರೀ ಪುರಸ್ಕಾರ ದೊರೆತಿದ್ದು, 1975ರ ವಿಶ್ವಕಪ್‌ ಜಯಿಸಿದ್ದ ಭಾರತ ತಂಡದ ಮುಖ್ಯ ಕೋಚ್‌ಆಗಿ ಕಾರ್ಯನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.