

ತಿರುವನಂತಪುರ: ನವೆಂಬರ್ 27ರಿಂದ ಡಿಸೆಂಬರ್ 3ರವರೆಗೆ ನೌಕಾಪಡೆ ಕಾರ್ಯಾಚರಣೆ ಪ್ರದರ್ಶನ ನಡೆಯಲಿದ್ದು, ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ.27 ರಿಂದ ಡಿ.3 ರವರೆಗೆ ಸಂಜೆ 4ರಿಂದ ಸಂಜೆ 06:15ರವರೆಗೆ ಎಲ್ಲಾ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಪ್ರಯಾಣಿಕರು ತಮ್ಮ ವಿಮಾನದ ಸಮಯವನ್ನು ಪರಿಶೀಲಿಸಲು ಮತ್ತು ಸಹಕರಿಸಲು ಕೋರಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಭಾರತೀಯ ನೌಕಾಪಡೆಯು ಡಿಸೆಂಬರ್ 4ರಂದು ತಿರುವನಂತಪುರದ ಶಂಗುಮುಗಂ ಬೀಚ್‌ನಲ್ಲಿ ಅದ್ಭುತ ಕಾರ್ಯಾಚರಣೆ ಪ್ರದರ್ಶನದೊಂದಿಗೆ 2025ರ ನೌಕಾಪಡೆಯ ದಿನವನ್ನು ಆಚರಿಸಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.