ADVERTISEMENT

ಕೋವಿಡ್-19 ಭೀತಿ: ಪ್ರಯಾಣಿಕರಿಲ್ಲದ ಕಾರಣ 84 ರೈಲುಗಳನ್ನು ರದ್ದು ಮಾಡಿದ ರೈಲ್ವೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 7:50 IST
Last Updated 19 ಮಾರ್ಚ್ 2020, 7:50 IST
ರೈಲಿನಲ್ಲಿ ಪ್ರಯಾಣಿಸುತ್ತಿರುವ ಯುವತಿ (ಸಾಂದರ್ಭಿಕ ಚಿತ್ರ)
ರೈಲಿನಲ್ಲಿ ಪ್ರಯಾಣಿಸುತ್ತಿರುವ ಯುವತಿ (ಸಾಂದರ್ಭಿಕ ಚಿತ್ರ)   

ನವದೆಹಲಿ:ಕೋವಿಡ್ ಭೀತಿಯಿಂದಾಗಿ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿರುವ ಕಾರಣ ಮಾರ್ಚ್ 20ರಿಂದ ಮಾರ್ಚ್ 30ರವರೆಗಿರುವ84 ರೈಲುಗಳನ್ನು ರದ್ದು ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ಕಳೆದ ಮೂರು ದಿನಗಳಿಂದ ಇಲ್ಲಿಯವರೆಗೆ ರದ್ದಾಗಿರುವ ರೈಲುಗಳ ಸಂಖ್ಯೆ 155 ಆಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳ ಹೇಳಿದ್ದಾರೆ. ಈ ಹಿಂದೆ ರೈಲ್ವೆ ಇಲಾಖೆ 71 ರೈಲುಗಳನ್ನು ರದ್ದು ಮಾಡಿತ್ತು.

ಕಳೆದ ಕೆಲವು ದಿನಗಳಿಂದ ಶೇ.60ರಷ್ಟು ರೈಲ್ವೆ ಟಿಕೆಟ್‌ಗಳು ರದ್ದಾಗುತ್ತಿವೆ. ಎಲ್ಲ ವಲಯಗಳಲ್ಲಿಯೂ ಟಿಕೆಟ್ ರದ್ದಾಗುತ್ತಲೇ ಇದೆ. ಟಿಕೆಟ್ ರದ್ದು ಮಾಡುವಾಗ ಪ್ರಯಾಣಿಕರಿಂದಯಾವುದೇ ಶುಲ್ಕ ವಸೂಲಾತಿ ಮಾಡುವುದಿಲ್ಲ. ಟಿಕೆಟ್‌ನ ಮೊತ್ತವನ್ನೇ ಪ್ರಯಾಣಿಕರಿಗೆ ಮರಳಿಸುತ್ತಿದ್ದೇವೆ ಎಂದು ರೈಲ್ವೆ ಇಲಾಖೆ ಹೇಳಿದೆ.

ADVERTISEMENT

ಅದೇ ವೇಳೆ ಅನಗತ್ಯ ಪ್ರಯಾಣ ಕೈಗೊಳ್ಳಬೇಡಿ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಮನವಿ ಮಾಡಿದ್ದಾರೆ. ಮಂಗಳವಾರ ರೈಲ್ವೆ ಅಧಿಕಾರಿಗಳ ಪುನರ್‌ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿದ ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯಲ್, ಕೊರೊನಾ ಸೋಂಕು ಹರಡದಂತೆ ರೈಲ್ವೆ ಇಲಾಖೆಯ ಎಲ್ಲ ವಲಯಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.