ಕೀರ್ತಿ ವರ್ಧನ್ ಸಿಂಗ್
(ಸಂಗ್ರಹ ಚಿತ್ರ)
ನವದೆಹಲಿ: ಸಂಯುಕ್ತ ಅರಬ್ ಸಂಸ್ಥಾನ ರಾಷ್ಟ್ರದಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ 25 ಭಾರತೀಯರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಶಿಕ್ಷೆ ಈವರೆಗೂ ಜಾರಿಯಾಗಿಲ್ಲ ಎಂದು ಸರ್ಕಾರ ಸಂಸತ್ತಿಗೆ ಗುರುವಾರ ಮಾಹಿತಿ ನೀಡಿದೆ.
ವಿದೇಶಗಳ ಜೈಲುಗಳಲ್ಲಿ ಕಳೆದ ಹಲವು ವರ್ಷಗಳಿಂದ ಇರುವ ಭಾರತೀಯರ ಸಂಖ್ಯೆ ಎಷ್ಟು? ಮರಣದಂಡನೆ ಶಿಕ್ಷೆಗೆ ಗುರಿಯಾದವರು ಎಷ್ಟು ಜನ? ಇವರನ್ನು ಉಳಿಸಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬ ಪ್ರಶ್ನೆಗಳಿಗೆ ರಾಜ್ಯಸಭೆಯಲ್ಲಿ ಲಿಖಿತ ರೂಪದಲ್ಲಿ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ರಾಜ್ಯಖಾತೆ ಸಚಿವ ಕೀರ್ತಿ ವರ್ಧನ್ ಸಿಂಗ್ ಈ ಮಾಹಿತಿ ನೀಡಿದ್ದಾರೆ.
‘ಸರ್ಕಾರದ ಬಳಿ ಇರುವ ಮಾಹಿತಿ ಅನ್ವಯ ವಿದೇಶಗಳ ಜೈಲಿನಲ್ಲಿ 10,152 ಭಾರತೀಯರು ಇದ್ದಾರೆ. ಇವರಲ್ಲಿ ವಿಚಾರಣಾಧೀನ ಕೈದಿಗಳೂ ಸೇರಿದ್ದಾರೆ. ವಿದೇಶಗಳಲ್ಲಿರುವ ಹಾಗೂ ವಿವಿಧ ರಾಷ್ಟ್ರಗಳ ಜೈಲಿನಲ್ಲಿರುವವರ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮಕ್ಕೆ ಸರ್ಕಾರ ಹೆಚ್ಚಿನ ಪ್ರಾತಿನಿಧ್ಯ ನೀಡಿದೆ. ಒಟ್ಟು ಎಂಟು ರಾಷ್ಟ್ರಗಳಲ್ಲಿ ಹಲವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಅದು ಇನ್ನಷ್ಟೇ ಜಾರಿಯಾಗಬೇಕಿದೆ’ ಎಂದು ಅವರು ತಿಳಿಸಿದ್ದಾರೆ.
‘ಸಂಯುಕ್ತ ಅರಬ್ ಸಂಸ್ಥಾನದಲ್ಲಿ 25, ಸೌದಿ ಅರೇಬಿಯಾದಲ್ಲಿ 11, ಮಲೇಷ್ಯಾದಲ್ಲಿ 6, ಕುವೈತ್‌ನಲ್ಲಿ ಮೂರು, ಇಂಡೊನೇಷ್ಯಾ, ಕತಾರ್, ಅಮೆರಿಕ ಹಾಗೂ ಯೆಮನ್‌ನಲ್ಲಿ ತಲಾ ಒಬ್ಬರು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. ಮರಣದಂಡನೆಗೆ ಗುರಿಯಾದವರನ್ನು ಪಾರು ಮಾಡುವ ಉದ್ದೇಶದಿಂದ ಸರ್ಕಾರವು ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ. ಕ್ಷಮಾಪಣಾ ಅರ್ಜಿ, ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಕ್ರಮ ಕೈಗೊಳ್ಳುವ ಪ್ರಕ್ರಿಯೆಯನ್ನು ಸರ್ಕಾರ ಕೈಗೊಂಡಿದೆ’ ಎಂದು ರಾಜ್ಯಸಭೆಗೆ ತಿಳಿಸಿದ್ದಾರೆ.
‘ಮಲೇಷ್ಯಾ, ಕುವೈತ್, ಕತಾರ್ ಹಾಗೂ ಸೌದಿ ಅರೇಬಿಯಾದಲ್ಲಿ ಕಳೆದ ಐದು ವರ್ಷಗಳಲ್ಲಿ ಭಾರತೀಯರಿಗೆ ಮರಣದಂಡನೆ ವಿಧಿಸಲಾಗಿದೆ. 2024ರಲ್ಲಿ ಕುವೈತ್ ಹಾಗೂ ಸೌದಿ ಅರೇಬಿಯಾದಲ್ಲಿ ತಲಾ ಮೂವರಿಗೆ ಮರಣದಂಡನೆ ವಿಧಿಸಲಾಗಿದೆ. ಜಿಂಬಾಬ್ವೆಯಲ್ಲಿ ಒಬ್ಬರಿಗೆ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ. 2023ರಲ್ಲಿ ಕುವೈತ್ ಹಾಗೂ ಸೌದಿ ಅರೇಬಿಯಾ ಐವರಿಗೆ ಮತ್ತು ಮಲೇಷ್ಯಾ ನ್ಯಾಯಾಲಯವು ಒಬ್ಬರಿಗೆ ಮರಣದಂಡನೆ ವಿಧಿಸಿದೆ’ ಎಂದು ಹೇಳಿದ್ದಾರೆ.
‘2020ರಿಂದ 2024ರವರೆಗೆ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಯಾರೊಬ್ಬರಿಗೂ ಮರಣದಂಡನೆ ವಿಧಿಸಿರುವ ಕುರಿತು ಅನೌಪಚಾರಿಕ ಮಾಹಿತಿ ಇದೆಯೇ ಹೊರತು, ಅಲ್ಲಿನ ಸರ್ಕಾರದಿಂದ ಅಧಿಕೃತ ಮಾಹಿತಿ ಲಭ್ಯವಿಲ್ಲ’ ಎಂದು ಕೀರ್ತಿ ವರ್ಧನ್ ಸಿಂಗ್ ಹೇಳಿದ್ದಾರೆ.UAEನಲ್ಲಿ 25 ಭಾರತೀಯರಿಗೆ ಮರಣದಂಡನೆ; ಇನ್ನಷ್ಟೇ ತೀರ್ಪು ಜಾರಿ: ಸರ್ಕಾರ
ನವದೆಹಲಿ: ಸಂಯುಕ್ತ ಅರಬ್ ಸಂಸ್ಥಾನ ರಾಷ್ಟ್ರದಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ 25 ಭಾರತೀಯರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಶಿಕ್ಷೆ ಈವರೆಗೂ ಜಾರಿಯಾಗಿಲ್ಲ ಎಂದು ಸರ್ಕಾರ ಸಂಸತ್ತಿಗೆ ಗುರುವಾರ ಮಾಹಿತಿ ನೀಡಿದೆ.
ವಿದೇಶಗಳ ಜೈಲುಗಳಲ್ಲಿ ಕಳೆದ ಹಲವು ವರ್ಷಗಳಿಂದ ಇರುವ ಭಾರತೀಯರ ಸಂಖ್ಯೆ ಎಷ್ಟು? ಮರಣದಂಡನೆ ಶಿಕ್ಷೆಗೆ ಗುರಿಯಾದವರು ಎಷ್ಟು ಜನ? ಇವರನ್ನು ಉಳಿಸಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬ ಪ್ರಶ್ನೆಗಳಿಗೆ ರಾಜ್ಯಸಭೆಯಲ್ಲಿ ಲಿಖಿತ ರೂಪದಲ್ಲಿ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ರಾಜ್ಯಖಾತೆ ಸಚಿವ ಕೀರ್ತಿ ವರ್ಧನ್ ಸಿಂಗ್ ಈ ಮಾಹಿತಿ ನೀಡಿದ್ದಾರೆ.
‘ಸರ್ಕಾರದ ಬಳಿ ಇರುವ ಮಾಹಿತಿ ಅನ್ವಯ ವಿದೇಶಗಳ ಜೈಲಿನಲ್ಲಿ 10,152 ಭಾರತೀಯರು ಇದ್ದಾರೆ. ಇವರಲ್ಲಿ ವಿಚಾರಣಾಧೀನ ಕೈದಿಗಳೂ ಸೇರಿದ್ದಾರೆ. ವಿದೇಶಗಳಲ್ಲಿರುವ ಹಾಗೂ ವಿವಿಧ ರಾಷ್ಟ್ರಗಳ ಜೈಲಿನಲ್ಲಿರುವವರ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮಕ್ಕೆ ಸರ್ಕಾರ ಹೆಚ್ಚಿನ ಪ್ರಾತಿನಿಧ್ಯ ನೀಡಿದೆ. ಒಟ್ಟು ಎಂಟು ರಾಷ್ಟ್ರಗಳಲ್ಲಿ ಹಲವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಅದು ಇನ್ನಷ್ಟೇ ಜಾರಿಯಾಗಬೇಕಿದೆ’ ಎಂದು ಅವರು ತಿಳಿಸಿದ್ದಾರೆ.
‘ಸಂಯುಕ್ತ ಅರಬ್ ಸಂಸ್ಥಾನದಲ್ಲಿ 25, ಸೌದಿ ಅರೇಬಿಯಾದಲ್ಲಿ 11, ಮಲೇಷ್ಯಾದಲ್ಲಿ 6, ಕುವೈತ್‌ನಲ್ಲಿ ಮೂರು, ಇಂಡೊನೇಷ್ಯಾ, ಕತಾರ್, ಅಮೆರಿಕ ಹಾಗೂ ಯೆಮನ್‌ನಲ್ಲಿ ತಲಾ ಒಬ್ಬರು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. ಮರಣದಂಡನೆಗೆ ಗುರಿಯಾದವರನ್ನು ಪಾರು ಮಾಡುವ ಉದ್ದೇಶದಿಂದ ಸರ್ಕಾರವು ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ. ಕ್ಷಮಾಪಣಾ ಅರ್ಜಿ, ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಕ್ರಮ ಕೈಗೊಳ್ಳುವ ಪ್ರಕ್ರಿಯೆಯನ್ನು ಸರ್ಕಾರ ಕೈಗೊಂಡಿದೆ’ ಎಂದು ರಾಜ್ಯಸಭೆಗೆ ತಿಳಿಸಿದ್ದಾರೆ.
‘ಮಲೇಷ್ಯಾ, ಕುವೈತ್, ಕತಾರ್ ಹಾಗೂ ಸೌದಿ ಅರೇಬಿಯಾದಲ್ಲಿ ಕಳೆದ ಐದು ವರ್ಷಗಳಲ್ಲಿ ಭಾರತೀಯರಿಗೆ ಮರಣದಂಡನೆ ವಿಧಿಸಲಾಗಿದೆ. 2024ರಲ್ಲಿ ಕುವೈತ್ ಹಾಗೂ ಸೌದಿ ಅರೇಬಿಯಾದಲ್ಲಿ ತಲಾ ಮೂವರಿಗೆ ಮರಣದಂಡನೆ ವಿಧಿಸಲಾಗಿದೆ. ಜಿಂಬಾಬ್ವೆಯಲ್ಲಿ ಒಬ್ಬರಿಗೆ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ. 2023ರಲ್ಲಿ ಕುವೈತ್ ಹಾಗೂ ಸೌದಿ ಅರೇಬಿಯಾ ಐವರಿಗೆ ಮತ್ತು ಮಲೇಷ್ಯಾ ನ್ಯಾಯಾಲಯವು ಒಬ್ಬರಿಗೆ ಮರಣದಂಡನೆ ವಿಧಿಸಿದೆ’ ಎಂದು ಹೇಳಿದ್ದಾರೆ.
‘2020ರಿಂದ 2024ರವರೆಗೆ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಯಾರೊಬ್ಬರಿಗೂ ಮರಣದಂಡನೆ ವಿಧಿಸಿರುವ ಕುರಿತು ಅನೌಪಚಾರಿಕ ಮಾಹಿತಿ ಇದೆಯೇ ಹೊರತು, ಅಲ್ಲಿನ ಸರ್ಕಾರದಿಂದ ಅಧಿಕೃತ ಮಾಹಿತಿ ಲಭ್ಯವಿಲ್ಲ’ ಎಂದು ಕೀರ್ತಿ ವರ್ಧನ್ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.