
ಇಂಡಿಗೊ ವಿಮಾನ
ಇಂಡಿಗೊ ಸಂಸ್ಥೆಯು ದೆಹಲಿ ವಿಮಾನ ನಿಲ್ದಾಣದಿಂದ ತನ್ನ ದೇಶೀಯ ವಿಮಾನ ಸಂಚಾರವನ್ನು ರದ್ದು ಮಾಡಿದ ಬೆನ್ನಲ್ಲೇ, ಇತರ ಸಂಸ್ಥೆಗಳು ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಸಿವೆ.
‘ದೆಹಲಿ ವಿಮಾನ ನಿಲ್ದಾಣದಿಂದ 2025ರ ಡಿಸೆಂಬರ್ 5ರಂದು ಹೊರಡಬೇಕಿದ್ದ ಎಲ್ಲಾ ದೇಶಿ ವಿಮಾನಗಳು ಇಂದು ಮಧ್ಯರಾತ್ರಿ (23:59)ವರೆಗೆ ರದ್ದು ಮಾಡಲಾಗಿದೆ’ ಎಂದು ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಪ್ರಯಾಣಿಕರ ಹಿತರಕ ಅನುಭವಕ್ಕೆ ಎಲ್ಲಾ ಪಾಲುದಾರರೊಂದಿಗೆ ನಮ್ಮ ಸಿಬ್ಬಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಏರ್‌ಪೋರ್ಟ್ ಹೇಳಿದೆ.
ಶುಕ್ರವಾರ ಮಧ್ಯಾಹ್ನ 12.30ರ ವೇಳೆಗೆ ದೆಹಲಿಯಿಂದ ಬೆಂಗಳೂರಿಗೆ ಆಕಾಸ ಏರ್‌ನಲ್ಲಿ ಕನಿಷ್ಠ ಪ್ರಯಾಣ ದರ ₹ 38,378 ಇತ್ತು. ಏರ್ ಇಂಡಿಯಾದಲ್ಲಿ ದರ ₹ 1,02,000ವರೆಗೂ ಇತ್ತು.
ದೆಹಲಿಯಿಂದ ಮುಂಬೈಗೆ ಕನಿಷ್ಠ ಪ್ರಯಾಣ ದರ ಏರ್ ಇಂಡಿಯಾದಲ್ಲಿ ₹ 34,058 ಇದ್ದರೆ, ಇತಿಹಾದ್‌ನಲ್ಲಿ₹ 1,68,210 ಇತ್ತು. ಈ ವಿಮಾನ ಅಬುಧಾಬಿಯಲ್ಲಿ 3 ಗಂಟೆ ತಂಗಿ ಮತ್ತೆ ಮುಂಬೈಗೆ ಬರುತ್ತದೆ.
ದೆಹಲಿಯಿಂದ ಹೈದರಾಬಾದ್‌ಗೆ ಶುಕ್ರವಾರ ಇತಿಹಾದ್ ಏರ್‌ಲೈನ್ಸ್‌ನ ಎರಡು ವಿಮಾನಗಳ ಸೇವೆ ಮಾತ್ರ ಲಭ್ಯವಿತ್ತು. ದೆಹಲಿಯಿಂದ ಅಬುಧಾಬಿಗೆ ತೆರಳಿ ಅಲ್ಲಿ 22 ಗಂಟೆ ತಂಗಿ ಮತ್ತೆ ಹೈದರಾಬಾದ್ ಬರುತ್ತದೆ. ಅದರ ದರ ₹ 1,05,556 ಇತ್ತು ಎಂದು ಸ್ಕೈಸ್ಕ್ಯಾನರ್ ವರದಿ ಮಾಡಿದೆ.
ದೆಹಲಿಯಿಂದ ಚೆನ್ನೈಗೂ ಇತಿಹಾದ್ ಸಂಸ್ಥೆಯ ವಿಮಾನ ಸೇವೆ ಮಾತ್ರ ಲಭ್ಯವಿದೆ ಎಂದು ಸ್ಕೈಸ್ಕ್ಯಾನರ್‌ನಲ್ಲಿ ತೋರಿಸುತ್ತಿತ್ತು. ಅದರ ದರ ₹ 72 ಸಾವಿರ ಇದ್ದು, ದೆಹಲಿಯಿಂದ ಅಬುಧಾಬಿಗೆ ತೆರಳಿ, ಅಲ್ಲಿ 10 ಗಂಟೆ ತಂಗಿ ಚೆನ್ನೈಗೆ ಬರುತ್ತದೆ.
ದೆಹಲಿ ಕೋಲ್ಕತ್ತ ನಡುವೆ ಸ್ಪೈಸ್‌ಜೆಟ್‌ನ ಎರಡು ವಿಮಾನಗಳು ಲಭ್ಯವಿದ್ದವು. ಕನಿಷ್ಠ ಟಿಕೆಟ್ ದರ ₹ 37,075 ಹಾಗೂ ಗರಿಷ್ಠ ₹ 38,034 ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.