ಇಂಡಿಗೊ
(ರಾಯಿಟರ್ಸ್ ಚಿತ್ರ)
ಮುಂಬೈ: ಗೋವಾದಿಂದ ಲಖನೌಗೆ ಹೋಗಿದ್ದ ಇಂಡಿಗೊ ವಿಮಾನವು ಸೋಮವಾರದಂದು ಪ್ರತಿಕೂಲ ಹವಾಮಾನದಿಂದಾಗಿ 'ಟರ್ಬ್ಯುಲೆನ್ಸ್'ಗೆ (ಗಾಳಿಯ ತೀವ್ರ ಏರಿಳಿತದಿಂದ ಆಗುವ ಪ್ರಕ್ಷುಬ್ಧತೆ) ಸಿಲುಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ 6ಇ 6811 ಇಂಡಿಗೊ ವಿಮಾನವನ್ನು ಸುರಕ್ಷಿತವಾಗಿ ಲಖನೌ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿತ್ತು.
ಜೂನ್ 16ರಂದು ಈ ಘಟನೆ ನಡೆದಿದೆ. ಮುಂಗಾರು ಮಳೆ ಬಿರುಸುಗೊಂಡಿರುವ ನಡುವೆ ವಿಮಾನವು ಪ್ರತಿಕೂಲ ಹವಾಮಾನದಿಂದಾಗಿ ಪ್ರಕ್ಷುಬ್ಧತೆಗೆ ಸಿಲುಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂತಹ ಕಠಿಣ ಪರಿಸ್ಥಿತಿ ಎದುರಿಸುವಲ್ಲಿ ನುರಿತ ತರಬೇತಿ ಪಡೆದ ಪೈಲಟ್ ಹಾಗೂ ಕ್ಯಾಬಿನ್ ಸಿಬ್ಬಂದಿ, ಪ್ರಯಾಣಿಕರ ಸುರಕ್ಷತೆ ಖಚಿತಪಡಿಸುವುದರೊಂದಿಗೆ ವಿಮಾನಯಾನದ ಶಿಷ್ಟಾಚಾರಗಳನ್ನು ಪಾಲಿಸಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಕಳೆದ ತಿಂಗಳು ಟಿಎಂಸಿ ಸಂಸದರ ನಿಯೋಗ ಸೇರಿದಂತೆ 227 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೊ ವಿಮಾನವು 'ಟರ್ಬ್ಯುಲೆನ್ಸ್'ಗೆ ಸಿಲುಕಿ ಅಲುಗಾಡಿದ ಘಟನೆ ನಡೆದಿತ್ತು. ಈ ಘಟನೆಯಲ್ಲಿ ವಿಮಾನದ ಚೂಪಾದ ಮೂತಿ ಹಾನಿಗೊಳಗಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.