ADVERTISEMENT

ಅಪಪ್ರಚಾರದ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿ; ಟಿವಿ ಚಾನೆಲ್‌ಗಳಿಗೆ ಕೇಂದ್ರದ ಸೂಚನೆ

ಏಜೆನ್ಸೀಸ್
Published 9 ಅಕ್ಟೋಬರ್ 2020, 14:26 IST
Last Updated 9 ಅಕ್ಟೋಬರ್ 2020, 14:26 IST
ಟಿವಿ ಚಾನೆಲ್‌ಗಳು–ಪ್ರಾತಿನಿಧಿಕ ಚಿತ್ರ
ಟಿವಿ ಚಾನೆಲ್‌ಗಳು–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕಾರ್ಯಕ್ರಮ ಸಂಹಿತೆಗೆ ಬದ್ಧರಾಗಿರುವಂತೆ ಎಲ್ಲ ಖಾಸಗಿ ಸ್ಯಾಟಿಲೈಟ್‌ ಟಿವಿ ಚಾನೆಲ್‌ಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶುಕ್ರವಾರ ನಿರ್ದೇಶಿಸಿದೆ. ಕಾರ್ಯಕ್ರಮಗಳಲ್ಲಿ ಯಾವುದೇ ವ್ಯಕ್ತಿ ಅಥವಾ ಗುಂಪುಗಳನ್ನು ಟೀಕಿಸುವುದು, ಅವಮಾನಿಸುವುದು ಅಥವಾ ಅಪಪ್ರಚಾರ ಮಾಡಬಾರದು ಎಂದಿದೆ.

ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣದಲ್ಲಿ ಡ್ರಗ್ಸ್‌ ವಿಚಾರದ ತನಿಖೆಗೆ ಸಂಬಂಧಿಸಿದಂತೆ ಮಾನಹಾನಿ ಮಾಡುವಂತಹ ಕಾರ್ಯಕ್ರಮಗಳನ್ನು ಪ್ರಸ್ತಾರ ಮಾಡುತ್ತಿರುವ ಬಗ್ಗೆ ಆರೋಪಿಸಿ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ದೆಹಲಿ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಡ್ರಗ್ಸ್‌ ಪ್ರಕರಣದ ವರದಿಗಳಲ್ಲಿ ತಮ್ಮ ಹೆಸರು ಬಳಸದಂತೆ ಮಾಧ್ಯಮಗಳಿಗೆ ಸೂಚನೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ಸಚಿವಾಲಯ ಈ ಸಲಹೆಗಳನ್ನು ಹೊರಡಿಸಿದೆ.

ಹಿಂದೆಯೂ ಹಲವು ಸಂದರ್ಭಗಳಲ್ಲಿ ಖಾಸಗಿ ಟಿವಿ ಚಾನೆಲ್‌ಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದಿರುವ ಸಚಿವಾಲಯ, ಕೇಬಲ್‌ ಟಿವಿ ಸಂಪರ್ಕ (ನಿಯಂತ್ರಣ) ಕಾಯ್ದೆ, 1995 ಅಡಿಯಲ್ಲಿ ವಿವರಿಸಲಾಗಿರುವ ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಗಳಿಗೆ ಬದ್ಧರಾಗಿ ಪ್ರಸಾರ ಮಾಡುವಂತೆ ಹೇಳಿದೆ.

ADVERTISEMENT

ಮಾನಹಾನಿ ಮಾಡುವಂತಹ, ಅರ್ಧ ಸತ್ಯವನ್ನು ಒಳಗೊಂಡ ಸುದ್ದಿಗಳು, ಸುಳ್ಳು ವರದಿಗಳು, ಅಸಭ್ಯ ಹಾಗೂ ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ವಿಷಯಗಳು ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಇರಬಾರದೆಂದು ಕಾರ್ಯಕ್ರಮ ಸಂಹಿತೆ ಹೇಳುತ್ತದೆ. ಕಾರ್ಯಕ್ರಮಗಳು ಯಾವುದೇ ವ್ಯಕ್ತಿ ಅಥವಾ ಗುಂಪುಗಳನ್ನು ಟೀಕಿಸುವುದು, ಅವಮಾನಿಸುವುದು ಅಥವಾ ಅಪಪ್ರಚಾರ ಮಾಡುವಂತಹ ಅಂಶಗಳನ್ನು ಒಳಗೊಂಡಿರಬಾರದು ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.