ADVERTISEMENT

ಅಂಬೇಡ್ಕರ್‌ ಪ್ರತಿಮೆಗೆ ಆರ್‌ಎಸ್‌ಎಸ್‌–ಬಿಜೆಪಿ ಅಡ್ಡಿ: ಕಾಂಗ್ರೆಸ್‌ ಆರೋಪ

ಪಿಟಿಐ
Published 10 ಜೂನ್ 2025, 15:44 IST
Last Updated 10 ಜೂನ್ 2025, 15:44 IST
<div class="paragraphs"><p>ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷದ ಲಾಂಛನಗಳು</p></div>

ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷದ ಲಾಂಛನಗಳು

   

ನವದೆಹಲಿ: ಗ್ವಾಲಿಯರ್‌ನ ಹೈಕೋರ್ಟ್‌ ಪೀಠದ ಸಮುಚ್ಚಯದ ಆವರಣದಲ್ಲಿ ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಪ್ರತಿಸ್ಥಾಪನೆ ತಡೆದಿರುವುದರ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರ ಒತ್ತಡ ಇದೆ. ‘ಇದೊಂದು ಪೂರ್ವ ಯೋಜಿತ ಪಿತೂರಿ’ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.

ಗ್ವಾಲಿಯರ್‌ ಹೈಕೋರ್ಟ್‌ ಆವರಣದಲ್ಲಿ ತಡ ಮಾಡದೇ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು ಎನ್ನುವುದು ಮಧ್ಯಪ್ರದೇಶ ವಿರೋಧ ಪಕ್ಷದ ನಿಲುವಾಗಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್‌ ಉಸ್ತುವಾರಿ ಹರೀಶ್‌ ಚೌಧರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ವೇಳೆ ಮಧ್ಯಪ್ರದೇಶ ಕಾಂಗ್ರೆಸ್‌ ಸಮಿತಿಯ ಹಿರಿಯ ಮುಖಂಡರು ಹಾಜರಿದ್ದರು.

ADVERTISEMENT

‘ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕೂಡಲೇ ಪ್ರತಿಮೆ ಸ್ಥಾಪನೆಗೆ ಇರುವ ಅಡ್ಡಿ ನಿವಾರಿಸಬೇಕು. ಹೈಕೋರ್ಟ್ ಅನುಮತಿ ಇದ್ದರೂ ಆರ್‌ಎಸ್‌ಎಸ್‌ನ ಕೆಲವರು ವಿವಾದ ಸೃಷ್ಟಿಸಿದ್ದಾರೆ. ಬಿಜೆಪಿ–ಆರ್‌ಎಸ್‌ಎಸ್ ಒತ್ತಡದಿಂದ ವಿಳಂಬ ಮಾಡಲಾಗುತ್ತಿದೆ. ’ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.