ಶ್ರೀನಗರ: ಕಾಶ್ಮೀರದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ವಿಪರೀತ ಶೀತಗಾಳಿ ಬೀಸುತ್ತಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಶ್ರೀನಗರದಲ್ಲಿ ಉಷ್ಣಾಂಶ -3.4 ಡಿಗ್ರಿಗೆ ತಲುಪಿದೆ. ಉಳಿದಂತೆ ಕುಪ್ವಾರಾ, ಗಾಜುಕುಂಡ್, ಕೊನಿಬಲ್ ಸೇರಿದಂತೆ ಹಲವೆಡೆ ಕನಿಷ್ಠ ತಾಪಮಾನ ಮೈನಸ್ 3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಡಿ.26ರವರೆಗೆ ಒಣ ಹವೆ ಇರಲಿದೆ. ಡಿ.21–22 ರಂದು ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ತಾಪಮಾನ ಕುಸಿದ ಪರಿಣಾಮ ಜಲಪಾತ, ನದಿಗಳ ನೀರು ಘನೀಕರಿಸುವ ಹಂತ ತಲುಪಿದೆ. ಹಲವು ಪ್ರದೇಶಗಳಲ್ಲಿ ಹಿಮ ಬೀಳುತ್ತಿರುವ ಕಾರಣ ಪ್ರವಾಸಿಗರ ಭೇಟಿಯೂ ಹೆಚ್ಚಿದ್ದು, ಸ್ಕೈಯಿಂಗ್ ಸೇರಿದಂತೆ ಹಿಮದ ಮಧ್ಯೆ ವಿವಿಧ ಆಟಗಳನ್ನಾಡಿ ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.