ADVERTISEMENT

ರಾಜ್ಯಗಳೂ ಇಂಧನದ ಮೇಲಿನ ತೆರಿಗೆ ತಗ್ಗಿಸಬೇಕೆಂಬುದು ಸರಿಯಲ್ಲ: ತಮಿಳುನಾಡು ಸಚಿವ

ಪಿಟಿಐ
Published 22 ಮೇ 2022, 15:58 IST
Last Updated 22 ಮೇ 2022, 15:58 IST
ಪಳನಿವೇಲ್‌ ತ್ಯಾಗರಾಜನ್‌
ಪಳನಿವೇಲ್‌ ತ್ಯಾಗರಾಜನ್‌    

ಚೆನ್ನೈ: ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕೇಂದ್ರವು ಭಾಗಶಃ ಕಡಿಮೆ ಮಾಡಿದೆ ಎಂದು ತಮಿಳುನಾಡು ಸರ್ಕಾರ ಭಾನುವಾರ ಹೇಳಿದೆ. ರಾಜ್ಯಗಳು ಸಹ ತೆರಿಗೆ ಕಡಿಮೆ ಮಾಡಬೇಕೆಂದು ನಿರೀಕ್ಷಿಸುವುದು ಸಮಂಜಸವಲ್ಲ ಎಂದೂ ಹೇಳಿದೆ.

ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು, ‘ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಗಳನ್ನು ಹೆಚ್ಚಿಸಿದಾಗ ಕೇಂದ್ರ ಸರ್ಕಾರವು ಎಂದಿಗೂ ರಾಜ್ಯಗಳೊಂದಿಗೆ ಸಮಾಲೋಚಿಸಲಿಲ್ಲ. ಈ ಹಿಂದೆ 2021ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಘೋಷಿಸಿದ ತೆರಿಗೆ ಕಡಿತದಿಂದಾಗಿ ಈಗಾಗಲೇ ₹1,000 ಕೋಟಿ ನಷ್ಟವನ್ನು ಅನುಭವಿಸಲಾಗಿದೆ. ಶನಿವಾರ ಘೋಷಿಸಿದ ತೆರಿಗೆ ಕಡಿತದ ಹೊರತಾಗಿಯೂ, 2014 ಕ್ಕೆ ಹೋಲಿಸಿದರೆ ದರಗಳು ಇನ್ನೂ ಹೆಚ್ಚಿವೆ’ ಎಂದು ಹೇಳಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹಲವು ಬಾರಿ ಹೆಚ್ಚಿಸಿದಾಗ ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಸಮಾಲೋಚಿಸಲಿಲ್ಲ. ಕೇಂದ್ರವು ತೆರಿಗೆಗಳಲ್ಲಿ ವಿಪರೀತ ಹೆಚ್ಚಳ ಮಾಡಿದ್ದು, ಈಗ ಕಡಿತದ ಮೂಲಕ ಭಾಗಶಃ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ADVERTISEMENT

ರಾಜ್ಯಗಳು ತೆರಿಗೆ ಕಡಿಮೆ ಮಾಡಬೇಕೆಂದು ನಿರೀಕ್ಷಿಸುವುದು ನ್ಯಾಯವಲ್ಲ, ಸಮಂಜಸವೂ ಅಲ್ಲ ಎಂದು ಪ್ರತಿಪಾದಿಸಿರುವ ಅವರು, ‘ಕೇಂದ್ರ ಸರ್ಕಾರವು ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದಕ್ಕೂ ಮೊದಲೇ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು 2021ರ ಆಗಸ್ಟ್‌ನಲ್ಲಿ ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ ₹3 ಕಡಿತಗೊಳಿಸಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.