ADVERTISEMENT

ಭೂ ವೀಕ್ಷಣಾ ಉಪಗ್ರಹ ಉಡ್ಡಯನ ಯಶಸ್ಸಿಗಾಗಿ ತಿರುಪತಿಯಲ್ಲಿ ‘ಇಸ್ರೊ’ ಅಧ್ಯಕ್ಷ ಪೂಜೆ

ಪಿಟಿಐ
Published 10 ಜನವರಿ 2026, 13:20 IST
Last Updated 10 ಜನವರಿ 2026, 13:20 IST
<div class="paragraphs"><p>ಇಸ್ರೊ ಅಧ್ಯಕ್ಷ ವಿ. ನಾರಾಯಣನ್‌ ಅವರು ತಿರುಪತಿ ತಿಮ್ಮಪ್ಪ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.</p></div>

ಇಸ್ರೊ ಅಧ್ಯಕ್ಷ ವಿ. ನಾರಾಯಣನ್‌ ಅವರು ತಿರುಪತಿ ತಿಮ್ಮಪ್ಪ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

   

ತಿರುಪತಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಭೂ ವೀಕ್ಷಣಾ ಉಪಗ್ರಹವನ್ನು (ಇಒಎಸ್–ಎನ್1) ಜನವರಿ 12ರಂದು ಉಡ್ಡಯನ ಮಾಡಲಿದ್ದು, ಇದಕ್ಕೂ ಮುನ್ನ ಇಸ್ರೊ ಅಧ್ಯಕ್ಷ ವಿ. ನಾರಾಯಣನ್‌ ಅವರು ತಿರುಪತಿ ತಿಮ್ಮಪ್ಪ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇದೇ ವೇಳೆ ಉಪಗ್ರಹ ನೌಕೆಯ ಸಣ್ಣ ಪ್ರತಿಕೃತಿಯನ್ನು ದೇವರ ಸನ್ನಿಧಿಯಲ್ಲಿ ಇರಿಸಿ ಇಸ್ರೊ ತಂಡ ಪ್ರಾರ್ಥನೆ ಸಲ್ಲಿಸಿದೆ.

ADVERTISEMENT

‘ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಸೋಮವಾರ ‘ಇಒಎಸ್–ಎನ್1’ ಉಪಗ್ರಹ ಉಡ್ಡಯನ ನಡೆಯಲಿದೆ. ಇದಕ್ಕಾಗಿ ಶನಿವಾರದಿಂದ 25 ಗಂಟೆಗಳ ಕೌಂಟ್‌ಡೌನ್‌ ಆರಂಭವಾಗಿದೆ’ ಎಂದು ನಾರಾಯಣನ್‌ ಹೇಳಿದ್ದಾರೆ.

ಇದು ಪಿಎಸ್‌ಎಲ್‌ವಿಯ 64ನೇ ಉಡ್ಡಯನವಾಗಿದೆ. ‘ಅನ್ವೇಷಾ’ ಹೆಸರಿನ ಈ ಉಪಗ್ರಹವನ್ನು ಸನ್‌– ಸಿಂಕ್ರೊನಸ್ ಕಕ್ಷೆಗೆ (ಎಸ್‌ಎಸ್‌ಒ) ಸೇರಿಸುವ ಗುರಿಯನ್ನು ಇಸ್ರೊ ಹೊಂದಿದೆ. ಈ ಉಪಗ್ರಹದಲ್ಲಿರುವ ಪೇಲೋಡ್‌ ಅನ್ನು ಥಾಯ್ಲೆಂಡ್‌ ಮತ್ತು ಬ್ರಿಟನ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಉಡ್ಡಯನಗೊಂಡ 17 ನಿಮಿಷಗಳಲ್ಲಿ ಉಪಗ್ರಹವು ಪೇಲೋಡ್‌ ಅನ್ನು ಉದ್ದೇಶಿತ ಕಕ್ಷೆಗೆ ನಿಯೋಜಿಸಲಿದೆ ಎಂದೂ ಅವರು ವಿವರಿಸಿದ್ದಾರೆ.

ಇದು, ಈ ವರ್ಷ ಇಸ್ರೊದ ಮೊದಲ ಉಪಗ್ರಹ ಉಡ್ಡಯನ ಆಗಿದೆ. ‘ಇಒಎಸ್–ಎನ್1’ ಉಡ್ಡಯನದೊಂದಿಗೆ ಭಾರತೀಯ ನೆಲದಿಂದ ಉಡ್ಡಯನ ಮಾಡಲಾದ ವಿದೇಶಿ ಉಪಗ್ರಹಗಳ ಸಂಖ್ಯೆ 442ಕ್ಕೆ ಏರಿಕೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.