ADVERTISEMENT

ತಮಿಳುನಾಡು ಪೊಲೀಸರ ಹೆಸರಲ್ಲಿ ಕರೆ: ಪೇಚಿಗೆ ಸಿಲುಕಿದ ಆಂಧ್ರ ಪೊಲೀಸರು

ಪಿಟಿಐ
Published 16 ಜೂನ್ 2025, 13:08 IST
Last Updated 16 ಜೂನ್ 2025, 13:08 IST
<div class="paragraphs"><p>ಪೊಲೀಸ್ – ಪ್ರಾತಿನಿಧಿಕ ಚಿತ್ರ</p></div>

ಪೊಲೀಸ್ – ಪ್ರಾತಿನಿಧಿಕ ಚಿತ್ರ

   

ಅಮರಾವತಿ: ತಮಿಳುನಾಡು ಪೊಲೀಸರು ಎಂದು ಹೇಳಿಕೊಂಡು ಬಂದ ಕರೆ ಆಂಧ್ರ ಪ್ರದೇಶ ಪೊಲೀಸರನ್ನು ಪೇಚಿಗೆ ಸಿಲುಕಿಸಿದೆ.

ಇಸ್ರೋ ಬಾಹ್ಯಾಕಾಶ ನಿಲ್ದಾಣ ಇರುವ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಭಯೋತ್ಪಾದಕನೊಬ್ಬ ಓಡಾಡುತ್ತಿದ್ದಾನೆಂದು ತಮಿಳುನಾಡು ಪೊಲೀಸರು ಎಂದು ಹೇಳಿಕೊಂಡು ಕರೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಆಂಧ್ರಪ್ರದೇಶ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಬಳಿಕ ಅದು ಹುಸಿ ಕರೆ ಎಂದು ಗೊತ್ತಾಗಿದೆ.

ADVERTISEMENT

ಭಾನುವಾರ ತಡರಾತ್ರಿ ಕರೆ ಬಂದಿದೆ.

ಶ್ರೀಹರಿಕೋಟಾ ಶ್ರೇಣಿ ಎಂದು ಕರೆಯಲಾಗುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವು ಇಸ್ರೋದ ಪ್ರಮುಖ ಉಡಾವಣಾ ತಾಣವಾಗಿದ್ದು ಸುಧಾರಿತ ಉಡಾವಣಾ ಮತ್ತು ಟ್ರ್ಯಾಕಿಂಗ್ ಸೌಲಭ್ಯಗಳನ್ನು ಹೊಂದಿದೆ.

‘ನಮಗೆ ಪ್ರದೇಶದಲ್ಲಿ ಯಾವುದೇ ಅಸಾಮಾನ್ಯ ಚಟುವಟಿಕೆ ಕಂಡುಬಂದಿಲ್ಲ. ಇದು ವಂಚನೆಯ ಕರೆ ಎಂದು ತೋರುತ್ತದೆ, ಆದರೆ ನಾವು ನಮ್ಮ ಪರಿಶೀಲನೆಗಳನ್ನು ಮುಂದುವರಿಸುತ್ತಿದ್ದೇವೆ’ ಎಂದು ನಾಯ್ಡುಪೇಟ ಉಪ ಪೊಲೀಸ್ ವರಿಷ್ಠಾಧಿಕಾರಿ ಜಿ. ಚಂಟಿಬಾಬು ತಿಳಿಸಿದ್ದಾರೆ.

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯೊಂದಿಗೆ ಸಮನ್ವಯ ಸಾಧಿಸಿದ ಅಧಿಕಾರಿಗಳು ಪ್ರದೇಶದ ಸುತ್ತಲೂ ತೀವ್ರ ಶೋಧ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.