ADVERTISEMENT

ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳ ಮೇಲೆ ಐಟಿ ದಾಳಿ: ₹23.45 ಕೋಟಿ ಅಕ್ರಮ ಹಣ ಪತ್ತೆ

ಪಿಟಿಐ
Published 25 ಅಕ್ಟೋಬರ್ 2021, 14:26 IST
Last Updated 25 ಅಕ್ಟೋಬರ್ 2021, 14:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ನಾಸಿಕ್‌ನ ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳ ಮೇಲೆ ಈಚೆಗೆ ಆದಾಯ ತೆರಿಗೆ ಇಲಾಖೆ (ಐಟಿ) ನಡೆಸಿದ ದಾಳಿಯಲ್ಲಿ ₹23.45 ಕೋಟಿ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಸೋಮವಾರ ಹೇಳಿದೆ.

₹100 ಕೋಟಿಯ ಕಾಳಧನವನ್ನೂ ಪತ್ತೆಹಚ್ಚಲಾಗಿದೆ ಎಂದೂ ತಿಳಿಸಿದೆ. ಅಕ್ಟೋಬರ್‌ 21 ರಂದು ದಾಳಿ ನಡೆದಿತ್ತು.

‘ಇವರಲ್ಲಿ ಪ್ರಮುಖ ವ್ಯಕ್ತಿಯು ಅಕ್ರಮ ಹಣವನ್ನು ಭೂ ಖರೀದಿಗಾಗಿ ಹೂಡಿಕೆ ಮಾಡಿದ್ದಾರೆ’ ಎಂದೂ ಸಿಬಿಡಿಟಿ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

‘ಮಹಾರಾಷ್ಟ್ರದ ಪಿಂಪಲ್ಗಾಂವ್ ಬಸ್ವಂತ್ ಪ್ರದೇಶದಲ್ಲಿ ಇವರುಈರುಳ್ಳಿ ಮತ್ತು ಇತರ ವಾಣಿಜ್ಯ ಬೆಳೆಗಳ ಸಗಟು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.