ಅಮರಾವತಿ: ‘ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಬಲಪ್ರಯೋಗ ಪ್ರಯೋಗಿಸಿ, ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುತ್ತಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಸರ್ವಾಧಿಕಾರದ ವಾತಾವರಣ ಸೃಷ್ಟಿಸುತ್ತಿದ್ದಾರೆ’ ಎಂದು ವೈಎಸ್‌ಆರ್‌ಸಿಪಿ ಪಕ್ಷದ ಮುಖ್ಯಸ್ಥ ಜಗನ್‌ಮೋಹನ್ ರೆಡ್ಡಿ ಆರೋಪಿಸಿದ್ದಾರೆ.
‘ಪ್ರಶ್ನಿಸುವ ಹಕ್ಕು, ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವದ ತಳಹದಿಯಾಗಿದೆ. ಸಮಸ್ಯೆಗಳ ಕುರಿತಂತೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡು ಹೊಣೆಗಾರಿಕೆ ಬೇಡಿಕೆ ಮುಂದಿಡುವುದು ನಾಗರಿಕರನ್ನು ಸಶಕ್ತಗೊಳಿಸುವ ಮಾರ್ಗವಾಗಿದೆ. ಆದರೆ, ಆಂಧ್ರಪ್ರದೇಶದಲ್ಲಿ ಪ್ರಜಾಪ್ರಭುತ್ವದ ಮೂಲ ತತ್ವವನ್ನೇ ನಾಯ್ಡು ಅವರ ಸರ್ವಾಧಿಕಾರ ಆಡಳಿತದಲ್ಲಿ ಹತ್ತಿಕ್ಕಲಾಗಿದೆ’ ಎಂದು ‘ಎಕ್ಸ್’ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಾದ್ಯಂತ ರೈತರು ಎದುರಿಸುತ್ತಿರುವ ಸಮಸ್ಯೆ ಅರಿತು, ಸರ್ಕಾರದ ಗಮನಸೆಳೆಯುವ ದೃಷ್ಟಿಯಿಂದ ಜಗನ್ ಅವರು ಇತ್ತೀಚಿಗೆ ರಾಜ್ಯ ಪ್ರವಾಸ ಕೈಗೊಂಡಿದ್ದರು. ಆರೋಪದ ಕುರಿತು ಟಿಡಿಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.