ADVERTISEMENT

ಮರಾಠ ಮೀಸಲು | ಆ. 29ರಿಂದ ಆಮರಣಾಂತ ಉಪವಾಸ, ಮುಂಬೈ ಚಲೋ: ಜರಾಂಗೆ

ಪಿಟಿಐ
Published 30 ಏಪ್ರಿಲ್ 2025, 13:09 IST
Last Updated 30 ಏಪ್ರಿಲ್ 2025, 13:09 IST
ಮನೋಜ್‌ ಜರಾಂಗೆ
ಮನೋಜ್‌ ಜರಾಂಗೆ   

ಛತ್ರಪತಿ ಸಂಭಾಜಿನಗರ: ನಮ್ಮ ಸಮುದಾಯದ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಆ. 29ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಮರಾಠ ಮೀಸಲಾತಿ ಹೋರಾಟಗಾರ ಮನೋಜ್‌ ಜರಾಂಗೆ ಬುಧವಾರ ಹೇಳಿದರು.

ಮರಾಠರು ಕುಣಬಿಗಳ ರಕ್ತ ಸಂಬಂಧಿಗಳು ಎಂಬ ಕರಡು ಅಧಿಸೂಚನೆಯನ್ನು ನಮ್ಮ ಸಮುದಾಯದ ಬೇಡಿಕೆಯಂತೆ ಜೂನ್‌ 6ರೊಳಗೆ ಕಾನೂನಾಗಿಸಬೇಕು ಎಂದು ಜಲ್ನಾ ಜಿಲ್ಲೆಯ ಅಂತರವಾಲಿ ಸರಾಟಿ ಗ್ರಾಮದಲ್ಲಿ ಸರ್ಕಾರಕ್ಕೆ ಗಡುವು ನಿಗದಿಪಡಿಸಿದರು.

ಸರ್ಕಾರವು ಬೇಡಿಕೆ ಈಡೇರಿಸದಿದ್ದರೆ ನಮಗೆ ಪರ್ಯಾಯವಿಲ್ಲ. ಆ.29ರಂದು ಮುಂಬೈ ಚಲೋ ನಡೆಸಲಿದ್ದೇವೆ. ಅಲ್ಲಿಯೇ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.