ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಶುಕ್ರವಾರ ತಮ್ಮ ಸಂಪುಟದ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಿದ್ದು, ಗೃಹ ಖಾತೆಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
ಕಾಂಗ್ರೆಸ್ ಶಾಸಕ ರಾಧಾಕೃಷ್ಣ ಕಿಶೋರ್ ಅವರಿಗೆ ಹಣಕಾಸು, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದಿಂದ ಚುನಾಯಿತರಾದ ದೀಪಕ್ ಬಿರುವಾ ಅವರಿಗೆ ಕಂದಾಯ ಹಾಗೂ ಅದೇ ಪಕ್ಷದವರಾದ ಚಾಮರಾ ಲಿಂಡಾ ಅವರಿಗೆ ಬುಡಕಟ್ಟು–ಪರಿಶಿಷ್ಟ ಜಾತಿ–ಹಿಂದುಳಿದ ವರ್ಗಗಳ ಅಭಿವೃದ್ಧಿ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. 12 ಸಚಿವರ ಸಂಪುಟದಲ್ಲಿ ಕಾಂಗ್ರೆಸ್‌ನ ನಾಲ್ವರಿಗೆ ಖಾತೆಗಳು ಸಿಕ್ಕಂತಾಗಿದೆ. ಜೆಎಂಎಂ ಶಾಸಕರಲ್ಲಿ ಏಳು ಮಂದಿಗೆ ಖಾತೆಗಳು ದೊರೆತಿವೆ. ಆರ್‌ಜೆಡಿಯ ಒಬ್ಬರಿಗೆ ಮಂತ್ರಿ ಸ್ಥಾನ ಸಿಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.