ADVERTISEMENT

ಹೇಮಂತ ಋತುವಿನಲ್ಲಿ ಹೇಮಂತ್ ಸೊರೇನ್‌ಗೆ ಒಲಿದ ಜಾರ್ಖಂಡ್ ಸಿಎಂ ಪಟ್ಟ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 12:25 IST
Last Updated 23 ಡಿಸೆಂಬರ್ 2019, 12:25 IST
 ಹೇಮಂತ್ ಸೊರೇನ್‌ ಹಾಗೂ ಅವರ ತಂದೆ ಶಿಬು ಸೊರೇನ್‌
 ಹೇಮಂತ್ ಸೊರೇನ್‌ ಹಾಗೂ ಅವರ ತಂದೆ ಶಿಬು ಸೊರೇನ್‌   

ರಾಂಚಿ: 81 ಸದಸ್ಯಬಲದ ಜಾರ್ಖಂಡ್ ವಿಧಾನಸಭೆಯ ಚುನಾವಣೆ ಫಲಿತಾಂಶ ಬಹುತೇಕ ಮುಕ್ತಾಯ ಹಂತ ತಲುಪಿದ್ದುಜೆಎಂಎಂ, ಕಾಂಗ್ರೆಸ್ ಹಾಗೂ ಆರ್‌ಜೆಡಿ ಸೇರಿ ರಚಿಸಿಕೊಂಡಿರುವ ‘ಮಹಾ ಘಟಬಂಧನ್’ ಸರಳ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದ್ದು ಆಡಳಿತರೂಢ ಬಿಜೆಪಿಗೆ ಮುಖಭಂಗವಾಗಿದೆ.

ಜಾರ್ಖಂಡ್‌ ಮತದಾರರು ಈ ಸಲಸ್ಥಿರ ಸರ್ಕಾರಕ್ಕೆ ಮಣೆ ಹಾಕಿ,ಮಹಾ ಘಟಬಂಧನ್‌ ಮೈತ್ರಿಕೂಟವನ್ನು ಗೆಲ್ಲಿಸಿದ್ದಾರೆ. 81 ಸ್ಥಾನಗಳಲ್ಲಿ ಸ್ಪಷ್ಟ ಬಹುಮತಕ್ಕೆ 41 ಸ್ಥಾನಗಳು ಬೇಕಾಗಿದ್ದು ಈ ಮ್ಯಾಜಿಕ್‌ ನಂಬರ್‌ ಅನ್ನು ಜೆಎಂಎಂ–ಕಾಂಗ್ರೆಸ್‌ ಮೈತ್ರಿಕೂಟ ಸುಲಭವಾಗಿ ಪಡೆದುಕೊಂಡಿದೆ.

ಈ ಬಾರಿಯ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ರಘುವರ ದಾಸ್ ಸೋಲುಅನುಭವಿಸಿದ್ದಾರೆ. 2014ರಲ್ಲಿ ಜೆಎಂಎಂ ಮತ್ತು ಕಾಂಗ್ರೆಸ್‌ ಕೇವಲ 25 ಸ್ಥಾನಗಳನ್ನು ಪಡೆದಿದ್ದವು. ಈ ಬಾರಿ ವರ್ಚಸ್ಸು ಹೆಚ್ಚಿಸಿಕೊಂಡು 45ರ ಗಡಿ ದಾಟಿವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 6 ಸ್ಥಾನಗಳಲ್ಲಿ ಜಯಗಳಿಸಿತ್ತು. ಈ ಬಾರಿ 15 ಸ್ಥಾನಗಳಲ್ಲಿ ಗೆದ್ದು ಬಲವನ್ನು ಹೆಚ್ಚಿಸಿಕೊಂಡಿದೆ.

ADVERTISEMENT

ಜೆಎಂಎಂ 28 ಸ್ಥಾನಗಳನ್ನು ಪಡೆದು ಬಲವರ್ದಿಸಿಕೊಂಡಿದೆ.ಶಿಬು ಸೊರೇನ್‌ ಅವರ ಮಗಹೇಮಂತ್ ಸೊರೇನ್‌ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಇತ್ತೀಚಿನ ಟ್ರೆಂಡಿಂಗ್‌ನಲ್ಲಿಬಿಜೆಪಿ 25, ಜೆಎಂಎಂ–ಕಾಂಗ್ರೆಸ್ ಮೈತ್ರಿಕೂಟ 46, ಇತರರು 10ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

2000ನೇ ಇಸ್ವಿಯಲ್ಲಿ ಬಿಹಾರದಿಂದ ಒಡೆದು, ರೂಪುಗೊಂಡ ಜಾರ್ಖಂಡ್ ರಾಜ್ಯವು ಈವರೆಗೆ 10 ಮುಖ್ಯಮಂತ್ರಿ ಗಳನ್ನು ಕಂಡಿದೆ. 19 ವರ್ಷಗಳ ಅವಧಿಯಲ್ಲಿ ಮೂರು ಬಾರಿ ರಾಷ್ಟ್ರಪತಿ ಆಡಳಿತವನ್ನೂ ಜಾರಿ ಮಾಡಲಾಗಿದೆ. ಹೊಸದಾಗಿ ಹುಟ್ಟಿಕೊಂಡ ಯಾವ ರಾಜ್ಯದಲ್ಲೂ ಈ ಪ್ರಮಾಣದ ರಾಜಕೀಯ ವಿಪ್ಲವ ದಾಖಲಾದ ಉದಾಹರಣೆಯಿಲ್ಲ.

2014ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಈ ರಾಜ್ಯದಲ್ಲಿ ಮಾತ್ರ ಪೂರ್ಣ ಬಹುಮತದೊಂದಿಗೆ ಆಡಳಿತ ನಡೆಸಿತು. ಬಿಜೆಪಿ 37 ಕ್ಷೇತ್ರಗಳಲ್ಲಿ, ಮಿತ್ರಪಕ್ಷ ಎಜೆಎಸ್‌ಯು (ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್) 6 ಕ್ಷೇತ್ರಗಳಲ್ಲಿ ಜಯಗಳಿಸಿ ಬಹುಮತ ಖಚಿತಪಡಿಸಿಕೊಂಡವು. ಈ ಮಧ್ಯೆ ಸರ್ಕಾರ ತನ್ನ ಸ್ಥಾನವನ್ನು ಇನ್ನಷ್ಟು ಗಟ್ಟಿಮಾಡಿಕೊಂಡಿತು. ಬಾಬುಲಾಲ್‌ ಮರಾಂಡಿ ನೇತೃತ್ವದ ಜಾರ್ಖಂಡ್ ವಿಕಾಸ್ ಮೋರ್ಚಾದ (ಜೆವಿಎಂ) ಎಂಟು ಶಾಸಕರ ಪೈಕಿ ಆರು ಶಾಸಕರು ಸರ್ಕಾರದ ಬೆಂಬಲಕ್ಕೆ ನಿಂತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.