ADVERTISEMENT

ತೆಲಂಗಾಣ | ಜೂಬ್ಲಿಹಿಲ್ಸ್ ಉಪಚುನಾವಣೆ: ಕಾಂಗ್ರೆಸ್‌ಗೆ ಎಐಎಂಐಎಂ ಪಕ್ಷ ಬೆಂಬಲ

ಪಿಟಿಐ
Published 21 ಅಕ್ಟೋಬರ್ 2025, 14:03 IST
Last Updated 21 ಅಕ್ಟೋಬರ್ 2025, 14:03 IST
<div class="paragraphs"><p>ಕಾಂಗ್ರೆಸ್‌</p></div>

ಕಾಂಗ್ರೆಸ್‌

   

ಹೈದರಾಬಾದ್: ತೆಲಂಗಾಣದ ಜೂಬ್ಲಿಹಿಲ್ಸ್ ವಿಧಾನಸಭಾ ಉಪಚುನಾವಣೆಗೆ ಬಿಆರ್‌ಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸಿವೆ.

ಬಿಆರ್‌ಎಸ್‌ ಶಾಸಕ ಮಾಗಂಟಿ ಗೋಪಿನಾಥ್ ಅವರ ನಿಧನದ ಹಿನ್ನೆಲೆಯಲ್ಲಿ ಜೂಬ್ಲಿಹಿಲ್ಸ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. 

ADVERTISEMENT

ಬಿಆರ್‌ಎಸ್‌ ಪಕ್ಷದಿಂದ ಗೋಪಿನಾಥ್ ಅವರ ಪತ್ನಿ ಮಾಗಂಟಿ ಸುನೀತಾ, ಕಾಂಗ್ರೆಸ್ ಪಕ್ಷದಿಂದ ನವೀನ್ ಯಾದವ್ ಹಾಗೂ ಬಿಜೆಪಿಯಿಂದ ಲಂಕಾಲ ದೀಪಕ್ ರೆಡ್ಡಿ ಸ್ಪರ್ಧೆ ಮಾಡುತ್ತಿದ್ದಾರೆ. ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. 

ನವೆಂಬರ್ 11ರಂದು ಉಪಚುನಾವಣೆ ನಡೆಯಲಿದ್ದು, ಮತ ಎಣಿಕೆ ನವೆಂಬರ್ 14ರಂದು ನಡೆಯಲಿದೆ. ಇಂದು (ಮಂಗಳವಾರ) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.