ADVERTISEMENT

ಭಾರತದಲ್ಲಿ 'ಕಾಮಸೂತ್ರ' ದಹನ: ಲೇಖಕಿ ತಸ್ಲಿಮಾ ನಸ್ರೀನ್ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಆಗಸ್ಟ್ 2021, 9:23 IST
Last Updated 31 ಆಗಸ್ಟ್ 2021, 9:23 IST
ಲೇಖಕಿ ತಸ್ಲಿಮಾ ನಸ್ರೀನ್, ಚಿತ್ರ ಕೃಪೆ–ತಸ್ಲಿಮಾ ನಸ್ರೀನ್ ಟ್ವಿಟರ್ ಖಾತೆ
ಲೇಖಕಿ ತಸ್ಲಿಮಾ ನಸ್ರೀನ್, ಚಿತ್ರ ಕೃಪೆ–ತಸ್ಲಿಮಾ ನಸ್ರೀನ್ ಟ್ವಿಟರ್ ಖಾತೆ   

ಬೆಂಗಳೂರು: ‘ಶೃಂಗಾರ‘ದ ಬಗ್ಗೆ ವರ್ಣನೆ, ಅದರ ಮಹತ್ವವನ್ನು ತಿಳಿಸಿಕೊಡುವ ವಾತ್ಸಾಯನನ 'ಕಾಮಸೂತ್ರ' ಗ್ರಂಥವು ಇಂದಿಗೂ ಕೂಡ ಸದಾ ಚರ್ಚಿತ ವಿಷಯವೇ ಸರಿ. ಈ ಗ್ರಂಥ ಜಗತ್ತಿನ ಶೃಂಗಾರ ಕಾವ್ಯಕ್ಕೆ ಒಂದು ಕೊಡುಗೆ ಎಂದು ಪರಿಗಣಿಸಲಾಗುತ್ತದೆ.

‘ಕಾಮಸೂತ್ರ‘ದ ಬಗ್ಗೆ ಸಾಂಪ್ರದಾಯಿಕ ಭಾರತೀಯರು ಹಲವು ಸಂದರ್ಭಗಳಲ್ಲಿ ಸಿಡುಕು ಪ್ರದರ್ಶಿಸಿದ್ದಾರೆ. ಇದೀಗ ಇಂತಹುದೇಘಟನೆ ಮತ್ತೊಂದು ನಡೆದಿದೆ. ಆ ಬಗ್ಗೆ ಲೇಖಕಿ ತಸ್ಲಿಮಾ ನಸ್ರೀನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

‘ಇತ್ತೀಚೆಗೆ ಗುಜರಾತ್‌ನ ಅಹಮದಾಬಾದ್‌ನ ಬುಕ್‌ಸ್ಟಾಲ್‌ ಒಂದರಲ್ಲಿ ‘ಕಾಮಸೂತ್ರ‘ ಗ್ರಂಥವನ್ನು ಮಾರುತ್ತಿದ್ದಾರೆ, ಅದರಲ್ಲಿ ಹಿಂದೂ ದೇವರಗಳನ್ನು ಅಶ್ಲೀಲಭಂಗಿಯಲ್ಲಿ ತೋರಿಸಿದ್ದಾರೆ ಎಂದು ಆರೋಪಿಸಿ ಭಜರಂಗದಳ ಸೇರಿದಂತೆ ಕೆಲ ಹಿಂದೂ ಸಂಘಟನೆಗಳ ಯುವಕರು ಅಂಗಡಿಗೆ ಮುತ್ತಿಗೆ ಹಾಕಿದ್ದರು. ನಂತರ ಗ್ರಂಥವನ್ನು ಸುಟ್ಟು ಹಾಕಿದ್ದರು. ಈ ಗ್ರಂಥ ಹಿಂದೂಗಳ ಭಾವನೆಗೆ ದಕ್ಕೆ ತರುತ್ತಿದೆ ಎಂಬುದಾಗಿ ಆರೋಪಿಸಿದ್ದರು‘ ಎಂದು ‘ದಿ ವೈರ್‘ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ADVERTISEMENT

ಈ ಬಗ್ಗೆ ಟ್ವಿಟರ್‌ನಲ್ಲಿ ಪರ ವಿರೋಧದ ಚರ್ಚೆಗಳು ಬಿರುಸು ಪಡೆದುಕೊಂಡಿವೆ. ಇನ್ನು ವಾತ್ಸಾಯನ ಎಂಬ ಸಂಸ್ಕೃತ ವಿದ್ವಾಂಸ ಕಾಮಸೂತ್ರ ಗ್ರಂಥವನ್ನು ರಚಿಸಿದ್ದು ಎನ್ನಲಾಗಿದೆ. ಇದು ಭಾರತೀಯ ಪುರಾತನ ಶೃಂಗಾರ ಕಾವ್ಯದ ಬಗ್ಗೆ ಹಾಗೂ ಲೈಂಗಿಕತೆಯ ಪ್ರಾಧಾನ್ಯವನ್ನು ವಿವರಿಸುತ್ತದೆ. ಇದು ಸಂಸ್ಕೃತದಲ್ಲಿ ರಚನೆಯಾಗಿದ್ದು, 1883 ರಲ್ಲಿ ಇಂಗ್ಲಿಷ್‌ನಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.