ADVERTISEMENT

ಶೂಟಿಂಗ್ ವೇಳೆ ಅವಘಡ: ಸಹೋದ್ಯೋಗಿಗಳ ಸಾವಿಗೆ ಸಂತಾಪ ಸೂಚಿಸಿದ ಕಮಲ್ ಹಾಸನ್

ಪಿಟಿಐ
Published 20 ಫೆಬ್ರುವರಿ 2020, 6:44 IST
Last Updated 20 ಫೆಬ್ರುವರಿ 2020, 6:44 IST
ಕಮಲ್ ಹಾಸನ್
ಕಮಲ್ ಹಾಸನ್   

ಚೆನ್ನೈ: ಇಂಡಿಯನ್ 2 ಚಿತ್ರದ ಚಿತ್ರೀಕರಣದ ವೇಳೆ ಕ್ರೇನ್ ಕುಸಿದು ಬಿದ್ದು ಸಂಭವಿಸಿದ ಅವಘಡದಲ್ಲಿ ಮೂವರು ನೌಕರರನ್ನು ಚಿತ್ರತಂಡ ಕಳೆದುಕೊಂಡಿದೆ. ಈ ಘಟನೆ ಬಗ್ಗೆ ಸಂತಾಪ ವ್ಯಕ್ತ ಪಡಿಸಿದ ನಟ ಕಮಲ್ ಹಾಸನ್, ಹಲವಾರು ಅವಘಡಗಳನ್ನು ನೋಡಿದ್ದೇನೆ ಆದರೆ ಇದು ಭೀಕರವಾದುದು ಎಂದಿದ್ದಾರೆ.

ಮೂವರು ದಕ್ಷ ಟೆಕ್ಶಿಷಿಯನ್‌ಗಳನ್ನು ನಾವು ಕಳೆದುಕೊಂಡಿದ್ದು ಅತೀವ ದುಃಖವನ್ನುಂಟು ಮಾಡಿದೆ ಎಂದು ಲೈಕಾ ಪ್ರೊಡಕ್ಷನ್ ಹೇಳಿದೆ.

ನಾವು ಮೂವರು ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇವೆ.ಅವರ ಕುಟುಂಬಕ್ಕೆ ತುಂಬಲಾರದ ನಷ್ಟವುಂಟಾಗಿದೆ ಇದು ನನ್ನ ನೋವಿಗಿಂತಲೂ ಹೆಚ್ಚು. ಅವರ ದುಃಖದಲ್ಲಿ ನಾನು ಭಾಗಿಯಾಗುತ್ತೇನೆ ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.