ADVERTISEMENT

Indian Politics | ದೆಹಲಿ ನಿವಾಸದಲ್ಲಿ ಆಪ್ತರ ಜತೆ ಕಮಲ್‌ನಾಥ್ ಸಭೆ

ಕಾಂಗ್ರೆಸ್‌ ಆಲೋಚನೆ ಕಮಲ್‌ ಅವರಿಗಿಲ್ಲ: ಸಜ್ಜನ್‌ ಸಿಂಗ್‌ ವರ್ಮಾ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 12:50 IST
Last Updated 19 ಫೆಬ್ರುವರಿ 2024, 12:50 IST
ಕಮಲ್‌ನಾಥ್
ಕಮಲ್‌ನಾಥ್   

ನವದೆಹಲಿ: ಕಾಂಗ್ರೆಸ್‌ನಲ್ಲಿ ಕಮಲ್‌ ನಾಥ್ ಮುಂದುವರಿಯುವರೋ ಇಲ್ಲವೋ ಎನ್ನುವ ಪ್ರಶ್ನೆಗೆ ಸೋಮವಾರವೂ ಉತ್ತರ ದೊರೆಯಲಿಲ್ಲ. 

ತಮ್ಮ ಆಪ್ತರು ಹಾಗೂ ಸಹವರ್ತಿಗಳೊಂದಿಗೆ ಕಮಲ್‌ ನಾಥ್ ಸೋಮವಾರ ಸಭೆ ನಡೆಸಿದರು. ಆದರೆ, ಮಾಧ್ಯಮದವರ ಜತೆಗೆ ಏನನ್ನೂ ಮಾತನಾಡಲಿಲ್ಲ. 

ಅವರ ನಿವಾಸದ ಮೇಲೆ ಹಾರಾಡುತ್ತಿದ್ದ ‘ಜೈ ಶ್ರೀ ರಾಮ್’ ಎಂಬ ಧ್ವಜವನ್ನು ತೆರವುಗೊಳಿಸಲಾಗಿದೆ ಎಂದು ಕೆಲವು ಮಾಧ್ಯಮ ವರದಿ ಮಾಡಿದ್ದವು. ಆ ಧ್ವಜ ಮತ್ತೆ ಅವರ ನಿವಾಸದ ಮೇಲೆ ಹಾರಾಡತೊಡಗಿದೆ. 

ADVERTISEMENT

ಕಮಲ್‌ ನಾಥ್ ಹಾಗೂ ಲೋಕಸಭಾ ಸದಸ್ಯರೂ ಆಗಿರುವ ಅವರ ಮಗ ನಕುಲ್‌ ನಾಥ್ ಕಾಂಗ್ರೆಸ್‌ ತೊರೆದು, ನಂತರ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹವಿದೆ. 

ಸೋಮವಾರ ಕಮಲ್‌ ನಾಥ್ ಅವರ ನಿವಾಸದಲ್ಲಿ ಸಭೆ ನಡೆದ ನಂತರ ಅವರ ಸಹವರ್ತಿ ಸಜ್ಜನ್‌ ಸಿಂಗ್‌ ವರ್ಮಾ ಮಾತನಾಡಿ, ‘40 ವರ್ಷಗಳ ಕಾಲ ಇದ್ದ ಕಾಂಗ್ರೆಸ್‌ ಪಕ್ಷವನ್ನು ತೊರೆಯುವ ಆಲೋಚನೆಯೇನೂ ಕಮಲ್‌ ನಾಥ್ ಅವರಿಗೆ ಇಲ್ಲ. ಅವರೇ ಹೈಕಮಾಂಡ್‌ ಆಗಿರುವಾಗ ಇಂತಹ ಪ್ರಶ್ನೆಯಾದರೂ ಹೇಗೆ ಮೂಡುತ್ತದೆ?’ ಎಂದು ಪ್ರತಿಕ್ರಿಯಿಸಿದರು. 

ರಾಹುಲ್‌ ಗಾಂಧಿ ಅವರ 'ಭಾರತ್‌ ಜೋಡೊ ನ್ಯಾಯ ಯಾತ್ರೆ"ಯು ಭೋಪಾಲ್‌ನಲ್ಲಿ ನಡೆಯಲಿದ್ದು, ಅಲ್ಲಿ ಕಮಲ್‌ ನಾಥ್‌ ಸಭೆ ನಡೆಸಲಿದ್ದಾರೆ ಎಂದೂ ಸಜ್ಜನ್‌ ಸಿಂಗ್‌ ವರ್ಮಾ ತಿಳಿಸಿದರು. 

‘ಮಧ್ಯಪ್ರದೇಶದಲ್ಲಿ ಲೋಕಸಭಾ ಚುನಾವಣೆ ಸಿದ್ಧತೆಗಳ ಕುರಿತು ಕಾಂಗ್ರೆಸ್‌ ಉಸ್ತುವಾರಿಗಳ ಜತೆಗೆ ಅವರು ಸಭೆ ನಡೆಸಲಿದ್ದಾರೆ. ಮಾಧ್ಯಮದ ಊಹಾಪೋಹದ ಬಗೆಗೆ ಸುಮ್ಮನೆ ಏನನ್ನು ಪ್ರತಿಕ್ರಿಯಿಸುವುದು ಎಂದು ಕಮಲ್‌ ನಾಥ್‌ ಅವರೇ ನನಗೆ ಹೇಳಿದರು’ ಎಂದು ಸಜ್ಜನ್‌ ಸಿಂಗ್ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.