ADVERTISEMENT

ರಾಷ್ಟ್ರ ರಾಜಧಾನಿಯಲ್ಲಿ ಕಾರ್ಗಿಲ್‌ ‘ವಿಜಯ ಓಟ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 1:51 IST
Last Updated 21 ಜುಲೈ 2019, 1:51 IST
ದೆಹಲಿಯಲ್ಲಿ ಆಯೋಜಿಸಿರುವ ಕಾರ್ಗಿಲ್‌ ವಿಜಯ ಓಟದಲ್ಲಿ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದಾರೆ. ಚಿತ್ರ: ಎಎನ್‌ಐ ಟ್ವೀಟ್
ದೆಹಲಿಯಲ್ಲಿ ಆಯೋಜಿಸಿರುವ ಕಾರ್ಗಿಲ್‌ ವಿಜಯ ಓಟದಲ್ಲಿ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದಾರೆ. ಚಿತ್ರ: ಎಎನ್‌ಐ ಟ್ವೀಟ್   

ನವದೆಹಲಿ:ಕಾರ್ಗಿಲ್‌ ವಿಜಯ ದಿನದ ಅಂಗವಾಗಿ ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ಕಾರ್ಗಿಲ್‌ ‘ವಿಜಯ ಓಟ’ ಆಯೋಜಿಸಲಾಗಿದೆ.

ದೇಶ ಕಾರ್ಗಿಲ್‌ ವಿಜಯದ 20ರ ಸಂಭ್ರಮದಲ್ಲಿದೆ. ಇದರ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಇಲ್ಲಿನ ವಿಜಯ್‌ ಚೌಕದಲ್ಲಿ ಬೆಳಿಗ್ಗೆ ‘ವಿಜಯ ಓಟ’ಕ್ಕೆ ಲೆಫ್ಟಿನೆಂಟ್‌ ಜನರಲ್‌ ಅಶ್ವಿನಿ ಕುಮಾರ್‌ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ADVERTISEMENT

ಈ ಓಟವು ಇಂಡಿಯಾ ಗೇಟ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಓಟದಲ್ಲಿ ಸಾವಿರಾರು ದೇಶಾಭಿಮಾನಿಗಳು ಪಾಲ್ಗೊಂಡಿದ್ದಾರೆ.

ಇಡೀ ದೇಶ ಕಾರ್ಗಿಲ್‌ ವಿಜಯದ 20ರ ಸಂಭ್ರಮದಲ್ಲಿರುವ ಈ ಹೊತ್ತಿನಲ್ಲಿ ಅದಕ್ಕೆ ಸಂಬಂಧಿಸಿದ ಮಾಹಿತಿ, ಲೇಖನ, ವಿಶೇಷ ವರದಿಗಳು ಪ್ರಜಾವಾಣಿ ಜಾಲತಾಣದಲ್ಲಿ ಸರಣಿಯಾಗಿ ಪ್ರಕಟವಾಗಲಿವೆ. ಸೈನಿಕರಿಗೆ ಕುಟುಂಬದವರಿಂದ ದೊರೆಯುವ ಬೆಂಬಲವೇನು ಎಂಬ ಪ್ರಶ್ನೆಗೆ ಉತ್ತರ ಹುಡುಕ ಹೊರಟ​ ಮೊದಲ ಲೇಖನ ಇಲ್ಲಿದೆ... ಸೈನಿಕರ ‘ಗೃಹ’ಬಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.