ವಿಜಯ್
ಬೆಂಗಳೂರು: ತಮಿಳುನಾಡಿನ ಕರೂರಿನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದ ಬಗ್ಗೆ ಟಿವಿಕೆ ಪಕ್ಷದ ನಾಯಕ ವಿಜಯ್ ಅವರು ಮೊದಲ ಬಾರಿಗೆ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಟಿವಿಕೆ ಪಕ್ಷ ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ಈ ವಿಡಿಯೊ ಹಂಚಿಕೊಂಡಿದೆ.
ನನ್ನ ಜೀವನದಲ್ಲಿ ನಾನು ಎಂದಿಗೂ ಇಂತಹ ದುರಂತ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ಘಟನೆಯನ್ನು ನೋಡಿ ನಾನು ತೀವ್ರ ದುಃಖಿತನಾಗಿದ್ದೇನೆ ಎಂದು ಹೇಳಿದ್ದಾರೆ.
ಜನರು ನನ್ನ ಮೇಲಿನ ಅಭಿಮಾನದಿಂದ ಅಲ್ಲಿಗೆ ನನ್ನನ್ನು ನೋಡಲು ಬಂದಿದ್ದರು. ಆದರೆ, ನಡೆಯಬಾರದು ನಡೆದು ಹೋಯಿತು. ಸಂತ್ರಸ್ತರೊಂದಿಗೆ ನಾನಿದ್ದೇನೆ ಎಂದು ಭರವಸೆ ತುಂಬಿದ್ದಾರೆ.
ಜನರ ಸುರಕ್ಷತೆಯೇ ನನ್ನ ಮೊದಲ ಆದ್ಯತೆಯಾಗಿತ್ತು. ಅದಕ್ಕಾಗಿಯೇ ನಾನು ಅವರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಸಮಾವೇಶಗಳನ್ನು ಆಯೋಜಿಸುತ್ತಾ ಬಂದಿದ್ದೆ. ಅದಕ್ಕಾಗಿ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿರುತ್ತೇವೆ. ಆದರೆ, ಕರೂರಿನಲ್ಲಿ ನಿರೀಕ್ಷೆ ಮೀರಿ ಜನಸಂದಣಿ ಉಂಟಾಯಿತು. ಆಗ ನಾನು ಅಲ್ಲಿಂದ ಹೊರಹೋಗಿದ್ದರೆ ಇನ್ನೂ ದೊಡ್ಡ ಅನಾಹುತ ಆಗುತ್ತಿತ್ತು ಎಂದಿದ್ದಾರೆ.
ಕಾಲ್ತುಳಿತದ ದುರಂತಕ್ಕೆ ಕಾರಣ ಏನು ಎಂಬುದು ಶೀಘ್ರವೇ ಗೊತ್ತಾಗಲಿದೆ. ಖಂಡಿತ ಸತ್ಯ ಹೊರಬಲಿದೆ. ನನ್ನನ್ನು ಟಾರ್ಗೆಟ್ ಮಾಡಿ, ಆದರೆ ಮುಗ್ದ ಜನರನ್ನಲ್ಲ ಎಂದು ಪರೋಕ್ಷವಾಗಿ ಡಿಎಂಕೆ ನಾಯಕರಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.