ಗಂಗಾ ಆರತಿ ಸಮಯದಲ್ಲಿ ಸೇರಿದ್ದ ಭಕ್ತ ಸಮೂಹ
ಪಿಟಿಐ ಚಿತ್ರ
ಹರಿದ್ವಾರ: ಉತ್ತರಾಖಂಡದ ಹರಿದ್ವಾರದಲ್ಲಿ ಅಪಾರ ಭಕ್ತರ ಕಂಠದಿಂದ ಹೊರಬಂದ ‘ಹರ ಹರ ಮಹಾದೇವ’, ‘ಬಮ್ ಬಮ್ ಭೋಲೆ’ ಘೋಷದೊಂದಿಗೆ 15 ದಿನಗಳ ಕಾವಡ್ ಯಾತ್ರೆ ಬುಧವಾರ ಮುಕ್ತಾಯಗೊಂಡಿತು.
ಲಕ್ಷಾಂತರ ಭಕ್ತರು ಗಂಗಾ ನದಿಯಲ್ಲಿ ಪವಿತ್ರ ಜಲ ಪಡೆದುಕೊಂಡರು. ಜತೆಗೆ ನಗರದಲ್ಲಿನ ಶಿವನ ದೇವಾಲಯಗಳಲ್ಲಿ ಜಲಾಭಿಷೇಕ ಕೈಗೊಂಡರು.
ಮೇಳ ನಿಯಂತ್ರಣ ಕೊಠಡಿಯ ಮಾಹಿತಿ ಪ್ರಕಾರ, ಈ ಬಾರಿಯ ಕಾವಡ್ ಯಾತ್ರೆಯಲ್ಲಿ 15 ದಿನಗಳಲ್ಲಿ 4.5 ಕೋಟಿ ಭಕ್ತರು ಹರಿದ್ವಾರಕ್ಕೆ ಬಂದು ಪವಿತ್ರ ಗಂಗಾಜಲವನ್ನು ಕೊಂಡೊಯ್ದಿದ್ದಾರೆ.
ಭಗವಂತ ಶಿವನ ಮಾವ ದಕ್ಷನ ನಿವಾಸ ಎಂದು ನಂಬಲಾದ ಕಂಖಾಲ್ ಪ್ರದೇಶದಲ್ಲಿರುವ ದಕ್ಷ ಪ್ರಜಾಪತಿ ಮಹಾದೇವ ದೇವಾಲಯದಲ್ಲಿ ಕೇಸರಿ ಬಣ್ಣದ ವಸ್ತ್ರಧರಿಸಿದ ಭಕ್ತರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.
ಗಂಗಾ ನದಿ ತೀರದಲ್ಲಿ ಸೇರಿದ್ದ ಭಕ್ತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.