ADVERTISEMENT

ಅತ್ಯಾಚಾರ: ಯುಎಇಯಿಂದ ಆರೋಪಿ ಭಾರತಕ್ಕೆ ಗಡಿಪಾರು

ಪಿಟಿಐ
Published 14 ಏಪ್ರಿಲ್ 2021, 8:52 IST
Last Updated 14 ಏಪ್ರಿಲ್ 2021, 8:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಅತ್ಯಾಚಾರದ ಆರೋಪ ಎದುರಿಸುತ್ತಿರುವ ಕೇರಳದ ನಿವಾಸಿ ಮೊಹಮ್ಮದ್‌ ಹಫೀಸ್‌ ವಟ್ಟಪರಂಬಿಲ್ ಉಮರ್ ಅವರನ್ನು ಅರಬ್‌ ಸಂಯುಕ್ತ ಸಂಸ್ಥಾನವು (ಯುಎಇ) ಗಡಿಪಾರು ಮಾಡಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ಮನವಿ ಮೇರೆಗೆ ಮೊಹಮ್ಮದ್‌ ಹಫೀಸ್‌ ವಿರುದ್ಧ ಇಂಟರ್‌ಪೋಲ್‌ ರೆಡ್‌ ನೋಟಿಸ್‌ ಜಾರಿ ಮಾಡಿತ್ತು.

ಸಿಬಿಐನ ಅಂತರರಾಷ್ಟ್ರೀಯ ಪೊಲೀಸ್ ಸಹಕಾರ ಘಟಕ ಮತ್ತು ಅಬುಧಾಬಿಯ ನ್ಯಾಷನಲ್‌ ಸೆಂಟ್ರಲ್‌ ಬ್ಯೂರೊ ಹಫೀಸ್‌ನನ್ನು ಯುಎಇನಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

ADVERTISEMENT

‘ಹಫೀಸ್‌ ಸೋಮವಾರ ಭಾರತಕ್ಕೆ ಬರಲಿದ್ದು, ಬಳಿಕ ಸಿಬಿಐ, ಕೇರಳದ ಮಲಪ್ಪುರಂ ಜಿಲ್ಲೆಯ ಪೊಲೀಸರಿಗೆ ಹಸ್ತಾಂತರಿಸಲಿದೆ’ ಎಂದು ಅಧಿಕಾರಿಗಳು ಹೇಳಿದರು.

‘ಡಿಸೆಂಬರ್‌, 24 2017ರಲ್ಲಿ ತಿರುವನಂತಪುರದ ರೈಲ್ವೆ ನಿಲ್ದಾಣದ ಕೊಠಡಿಯಲ್ಲಿ ಮಹಿಳೆಯೊಬ್ಬರ ಮೇಲೆ ಹಫೀಸ್‌ ಎರಡು ಬಾರಿ ಅತ್ಯಾಚಾರ ಎಸಗಿದ್ದ. ಬಳಿಕ ಮದುವೆಯ ಭರವಸೆ ನೀಡಿ, ಆಕೆಯನ್ನು ತಿಶ್ರೂರ್‌, ಪಾಲಕ್ಕಾಡ್ ಮತ್ತು ಶೋರನೂರ್‌ಗೆ ಕರೆದುಕೊಂಡು ಹೋಗಿದ್ದ. ಇದಾದ ಬಳಿಕ ಹಫೀಸ್‌ ಯುಎಇಗೆ ಓಡಿ ಹೋಗಿದ್ದ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.