ADVERTISEMENT

ಕೇರಳ ಎಸ್‌ಐಆರ್‌ | 9 ಲಕ್ಷ ಹೆಸರಿಗೆ ಕೊಕ್‌: ಮತದಾರರ ಅಂತಿಮ ಪಟ್ಟಿ ಪ್ರಕಟಿಸಿದ EC

ಪಿಟಿಐ
Published 21 ಫೆಬ್ರುವರಿ 2026, 15:37 IST
Last Updated 21 ಫೆಬ್ರುವರಿ 2026, 15:37 IST
   

ತಿರುವನಂತಪುರ: ಕೇರಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ಚುನಾವಣಾ ಆಯೋಗವು  ಅಂತಿಮ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.  ಸುಮಾರು 9 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿದೆ.

ಪರಿಷ್ಕರಣೆ ಬಳಿಕ, ರಾಜ್ಯದ ಒಟ್ಟು ಮತದಾರರ ಸಂಖ್ಯೆ 2.69 ಕೋಟಿಗೆ ಇಳಿಕೆಯಾಗಿದೆ. ಇದಕ್ಕೂ ಮುನ್ನ 2.78 ಕೋಟಿ ಮತದಾರರಿದ್ದರು.

‘ಎಸ್‌ಐಆರ್‌ ಭಾಗವಾಗಿ 36.88 ಲಕ್ಷ ಮತದಾರರಿಗೆ ವಿಚಾರಣೆ ಹಾಜರಾಗಲು ನೋಟಿಸ್‌ ರವಾನಿಸಲಾಗಿದೆ. ಈ ಪೈಕಿ 53,229 ಮಂದಿಯ ಹೆಸರು ಅಂತಿಮ ಪಟ್ಟಿಯಲ್ಲಿಲ್ಲ’ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

2025ರ ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗದ ಮತದಾರರ ಪಟ್ಟಿಯಲ್ಲಿ 2,86,07,658 ಮತದಾರರಿದ್ದರು.

‘ಜನವರಿ 31ರಿಂದ ಫೆಬ್ರುವರಿ 16ರವರೆಗೆ ಹೆಸರುಗಳ ತಿದ್ದುಪಡಿ, ಸೇರ್ಪಡೆ ಅಥವಾ ತೆಗೆದುಹಾಕಲು 4,01,386 ಅರ್ಜಿಗಳು ಸಲ್ಲಿಕೆಯಾಗಿವೆ. ಬಾಧಿತರು ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾದ ಬಳಿಕ ಆಯೋಗವನ್ನು ಸಂಪರ್ಕಿಸಬಹುದು.  ಅಂತಿಮ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೂ ಪರಿಶೀಲನೆಗಾಗಿ ನೀಡಲಾಗುತ್ತದೆ’ ಎಂದು ಆಯೋಗ ತಿಳಿಸಿದೆ.

‘ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲು ಉಮೇದುವಾರಿಕೆ ಸಲ್ಲಿಸುವ ಅಂತಿಮ ದಿನಾಂಕದವರೆಗೂ ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರ್ಪಡೆ ಮಾಡಲು ಅವಕಾಶವಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2,69,53,644 -ಎಸ್‌ಐಆರ್‌ ಬಳಿಕ ರಾಜ್ಯದ ಮತದಾರರ ಸಂಖ್ಯೆ

2,78,50,855 -ಪರಿಷ್ಕರಣೆಗೂ ಮುನ್ನ ಇದ್ದ ಮತದಾರರ ಸಂಖ್ಯೆ

8,97,211 -ಅಂತಿಮ ಪಟ್ಟಿಯಿಂದ ಕೈಬಿಟ್ಟ ಹೆಸರುಗಳ ಸಂಖ್ಯೆ

ಪರಿಷ್ಕೃತ ಮತದಾರರ ಪಟ್ಟಿಯ ವಿವರ

ಪುರುಷ; 1,31,26,048

ಮಹಿಳೆ;1,38,27,319

ಲಿಂಗತ್ವ ಅಲ್ಪಸಂಖ್ಯಾತರು: 277

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.