ADVERTISEMENT

ಖರ್ಗೆ ಭೇಟಿ ಮಾಡಿದ ಜರ್ಮನಿ ರಾಯಭಾರಿ, ಆಸ್ಟ್ರೇಲಿಯಾ ಹೈಕಮಿಷನರ್ 

ಪಿಟಿಐ
Published 29 ಜೂನ್ 2023, 13:15 IST
Last Updated 29 ಜೂನ್ 2023, 13:15 IST
ನವದೆಹಲಿಯಲ್ಲಿ ಗುರುವಾರ ಭಾರತದಲ್ಲಿನ ಜರ್ಮನಿಯ ರಾಯಭಾರಿ ಫಿಲಿಪ್ ಆಕರ್ಮನ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾದರು. ಚಿತ್ರ ಪಿಟಿಐ 
ನವದೆಹಲಿಯಲ್ಲಿ ಗುರುವಾರ ಭಾರತದಲ್ಲಿನ ಜರ್ಮನಿಯ ರಾಯಭಾರಿ ಫಿಲಿಪ್ ಆಕರ್ಮನ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾದರು. ಚಿತ್ರ ಪಿಟಿಐ     

ನವದೆಹಲಿ: ಭಾರತದಲ್ಲಿನ ಜರ್ಮನಿಯ ರಾಯಭಾರಿ ಫಿಲಿಪ್ ಆಕರ್ಮನ್ ಮತ್ತು ಆಸ್ಟ್ರೇಲಿಯಾದ ಹೈಕಮಿಷನರ್ ಬ್ಯಾರಿ ಒ'ಫಾರೆಲ್ ಅವರು ಗುರುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಭಾರತದೊಂದಿಗೆ ಉಭಯ ದೇಶಗಳ ಸಂಬಂಧ ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು.

ಖರ್ಗೆ ಅವರು ತಮ್ಮ ರಾಜಾಜಿ ಮಾರ್ಗ್ ನಿವಾಸದಲ್ಲಿ ನಡೆದ ಸಭೆಗಳ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ . 

‘ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯೊಂದಿಗೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿದ ದೇಶಗಳಲ್ಲಿ ಭಾರತವೂ ಒಂದಾಗಿದೆ. ದ್ವಿಪಕ್ಷೀಯವಾಗಿ ಮತ್ತು ಜಾಗತಿಕ ಸನ್ನಿವೇಶದಲ್ಲಿ ಇಂದು ಜರ್ಮಿನಿಯು ಭಾರತದ ಅತ್ಯಂತ ಮೌಲ್ಯಯುತ ಪಾಲುದಾರರಲ್ಲಿ ಒಂದಾಗಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.