
ಪ್ರಜಾವಾಣಿ ವಾರ್ತೆಮುಂಬೈ: ಉಪಮುಖ್ಯಮಂತ್ರಿ ಮತ್ತು ಶಿವಸೇನಾ ಮುಖ್ಯಸ್ಥ ಏಕನಾಥ್ ಶಿಂದೆ ಅವರ ವಿರುದ್ಧದ ಟೀಕೆಗೆ ಸಂಬಂಧಿಸಿ, ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ಮಂಗಳವಾರ ಇಲ್ಲಿನ ವಿಧಾನ ಭವನದಲ್ಲಿ ಮಹಾರಾಷ್ಟ್ರ ವಿಧಾನ ಪರಿಷತ್‌ನ ಹಕ್ಕುಚ್ಯುತಿ ಸಮಿತಿ ಮುಂದೆ ಹಾಜರಾದರು.
ಅವರೊಂದಿಗೆ ಶಿವಸೇನೆ (ಯುಬಿಟಿ) ನಾಯಕಿ ಸುಷ್ಮಾ ಅಂಧರೆ ಕೂಡ ಸಮಿತಿಯ ಮುಂದೆ ಹಾಜರಾದರು. ಆದರೆ, ದೂರುದಾರ ಪ್ರವೀಣ್ ದಾರೇಕರ್ ಮುಂಬೈನಿಂದ ಹೊರಗಿದ್ದ ಕಾರಣ ವಿಚಾರಣೆಯನ್ನು ಮಾರ್ಚ್ 10ಕ್ಕೆ ಮುಂದೂಡಲಾಯಿತು.
‘ದೂರುದಾರ ದಾರೇಕರ್ ಅನುಪಸ್ಥಿತಿಯಲ್ಲಿ ಹೇಳಿಕೆ ದಾಖಲಿಸುವುದು ಸೂಕ್ತವಲ್ಲ. ಎರಡೂ ಕಡೆಯ ಹೇಳಿಕೆಗಳನ್ನು ಒಂದೇ ದಿನ ದಾಖಲಿಸಿಕೊಳ್ಳಲಾಗುವುದು’ ಎಂದು ಹಕ್ಕುಚ್ಯುತಿ ಸಮಿತಿಯ ಮುಖ್ಯಸ್ಥ ಪ್ರಸಾದ್ ಲಾಡ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.